ಅಥವಾ

ಒಟ್ಟು 2 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸರ್ವಜೀವ ನಿನ್ನ ಹಾಹೆ ಎಂಬೆನೆ? ಅದು ಭಿನ್ನಭಾವ ತ್ರಿಗುಣಾತ್ಮಕರುಂಟು, ಅದು ನಿನಗನ್ಯವೆಂಬೆನೆ? ಆ ತ್ರಿಗುಣಾತ್ಮಕರು ನಿನ್ನ ತಿಲಾಂಶ. ಇಂತೀ ಸರ್ವಭೂತಕ್ಕೆ ನಿನ್ನ ದಯ. ಎನಗಿದೇಕೆ ಗೆಲ್ಲ ಸೋಲವೆಂಬ ಖುಲ್ಲತನ, ಎಲ್ಲ ಜೀವಕ್ಕೂ ಸರಿ. ಅರುಣೋದಯದಂತೆ ಎನ್ನ ಚಿತ್ತದಲ್ಲಿ ಸರ್ವಜೀವಕ್ಕೆ ಎಲ್ಲಕ್ಕೂ ದಯವ ಮಾಡು, ಚೆನ್ನ ದಸರೇಶ್ವರಲಿಂಗಾ.
--------------
ದಸರಯ್ಯ
ಪೃಥ್ವಿಯ ಅಂಶಿಕ ಅಂಗವಾಗಿ, ಅಪ್ಪುವಿನ ಅಂಶಿಕ ಶುಕ್ಲ ಶೋಣಿತವಾಗಿ, ತೇಜದ ಅಂಶಿಕ ಹಸಿವಾಗಿ, ವಾಯುವಿನಂಶಿಕ ಜೀವಾತ್ಮನಾಗಿ, ಆಕಾಶದ ಅಂಶಿಕ ಬ್ರಹ್ಮರಂದ್ರವಾಗಿ, ಇಂತೀ ಐದರ ಗುಣವುಳ್ಳನ್ನಕ್ಕ ಗೆಲ್ಲ ಸೋಲ ಬಿಡದು. ಇವನಲ್ಲಿಗಲ್ಲಿಯೆ ಇಂಬಿಟ್ಟು ಇಂತೀ ಲಲ್ಲೆಯ ಬಿಡಿಸಯ್ಯಾ. ಎನ್ನಲ್ಲಿ ನಿಮಗೆ ಖುಲ್ಲತನ ಬೇಡ. ಅದು ಎನ್ನ ಸೋಂಕಲ್ಲ, ಅದು ನಿನ್ನ ಸೋಂಕು ದಸರೇಶ್ವರಲಿಂಗಾ.
--------------
ದಸರಯ್ಯ
-->