ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಲಿಂಗಾಂಗಸಮರಸಾನುಭಾವವ ಬಲ್ಲೆನೆಂದು ನುಡಿದು ಕೊಂಬ ಖುಲ್ಲ ಕುಚೇಷಿ*ಗಳ ವಾಕ್ಪಟುವ ನೋಡಾ! ಕಾಯಸಂಗವರಿದಬಳಿಕ ಕರ್ಮಕ್ರಿಯಾವೇಷಧಾರಿಯಾಗಿ ಡಂಭಕನಡೆಯುಂಟೆ? ಮನಸಂಗವನರಿದಬಳಿಕ ಸೂತಕ ಪಾತಕ ಸಂಕಲ್ಪ ಸಂಶಯವೆಂಬ ಸಂಸ್ಕøತಿಯೊಳೊಡವೆರೆಯಲುಂಟೆ? ಪ್ರಾಣಸಂಗವನರಿದಬಳಿಕ ವಾಯುಪ್ರಕೃತಿಯ ವರ್ತಕವುಂಟೆ? ಭಾವಸಂಗವನರಿದಬಳಿಕ ಮಾಯಾಮೋಹ ವಿಷಯ ಭ್ರಾಂತಿನಸುಳುಹುಂಟೆ? ಕಾಯ ಮನ ಪ್ರಾಣ ಭಾವ ಕಳೆ ಹಿಂಗದೆ ಸಂಗಭಾವಿಯೆಂದರೆ ಹಿಂಗುವದು ಗುರುನಿರಂಜನ ಚನ್ನಬಸವಲಿಂಗಾನುಭಾವ.
--------------
ದೇಶಿಕೇಂದ್ರ ಸಂಗನಬಸವಯ್ಯ
ಕಲ್ಲು ಹಿಡಿದು ಅಲ್ಲಮನ ನೋಡುವೆವೆಂಬವರ ಖುಲ್ಲ ಮನುಜರೆಂಬೆ. ಕಲ್ಲು ಹಿಡಿದವರೆಲ್ಲ ಅಲ್ಲಮನಾಗಲು ಭವಬೀಜ ಇನ್ನೆಲ್ಲಿಯದಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನ.
--------------
ಸಿದ್ಧರಾಮೇಶ್ವರ
ಎಲ್ಲರಂತಲ್ಲ ನೋಡಿರೆ ನನ್ನ ನಲ್ಲ. ಬಲ್ಲಿದ ನಾರಾಯಣ ಬ್ರಹ್ಮರ ಕೂಡೆ ಮೆಲ್ಲನೆ ಸೇವೆಯ ಕೊಂಬನು. ಖುಲ್ಲ ದನುಜರನೆಲ್ಲ ನಿಲ್ಲದೆ ಸಂಹರಿಸಿದನು. ಕಲ್ಲುಕಲ್ಲಲಿ ಹೊಡೆಸಿಕೊಂಡನು. ಭಕ್ತಿಗೆ ಮೆಚ್ಚಿ ಬಿಲ್ಲಲಿ ಹೊಯಿಸಿಕೊಂಡನು. ಭಾವಕ್ಕೆ ಮೆಚ್ಚಿ ಸೊಲ್ಲಿಗೆ ಸೋತು ಶಿಶುವಾದನು ಅಮ್ಮವ್ವೆಗೆ. ಮಲ್ಲಮಲ್ಲರ ಗಂಡನೆಂಬ ಬಿರುದು ನೋಡಿರೆ ನಮ್ಮ ಅಖಂಡೇಶ್ವರನೆಂಬ ನಲ್ಲನಿಗೆ.
--------------
ಷಣ್ಮುಖಸ್ವಾಮಿ
-->