ಅಥವಾ

ಒಟ್ಟು 3 ಕಡೆಗಳಲ್ಲಿ , 1 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸಹೀದರು ಕೊಟ್ಟ ಖುರಾನವ ಮುಂದಿಟ್ಟು ಅರ್ಚಿಸಿ ನಮಾಜ ಮಾಡುವರು. ಮಾಟವಳಿದು ಕೂಟ ನಿಂದು ಶಬ್ದವಡಗಿ ಬಯಲ ಖುದಾನಾಗಿರಬಲ್ಲಡೆ ಸಹೀದರೆಂಬೆ ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
ಸಹೀದರ ಖುರಾನವ ನೋಡಿ ದಾಡಿ ಜವನ ಲೋಚವ ಬಿಟ್ಟು ದಿಗಂಬರವಾಗುವರು. ಆ ಖುರಾನವ ನೋಡಿ ದಾಡಿ ಜವನ ಲೋಚವ ಬೋಳಿಸಿ ಸಹೀದನಾಗುವನಾರನು ಕಾಣೆ, ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ ನಿರ್ಮಾಯಪ್ರಭುವೆ.
--------------
ಕಾಡಸಿದ್ಧೇಶ್ವರ
-->