ಅಥವಾ

ಒಟ್ಟು 13 ಕಡೆಗಳಲ್ಲಿ , 5 ವಚನಕಾರರು , 9 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಘನಕ್ಕೆ ಘನವೆಂಬವರ ಮನಕ್ಕೆ ತಂದು ಅನುಗೊಳಿಸಿದೆಯಲ್ಲಾ, ಅಲ್ಲಮದೇವಾ. `ಸರ್ವಂ ಖಲ್ವಿದಂ ಬ್ರಹ್ಮ' ಎಂದು ವಾಸಿದಲ್ಲಿ, ಲಿಂಗತ್ರಯದಲ್ಲಿ ಬೋಧಗೊಳಿಸಿದೆಯಲ್ಲಾ, ಅಲ್ಲಮದೇವಾ. ಮಾಡಿ ನೀಡುವೆನೆಂಬವರ ರೂಹು ಮೂಡದಂತೆ ಮಾಡಿದೆಯಲ್ಲಾ, ಅಲ್ಲಮದೇವಾ. ದೃಷ್ಟಿಗೆ ಬಿದ್ದವರ ಮಹದೈಶ್ವರ್ಯಕ್ಕಿಟ್ಟು, ನೀ ನೆಟ್ಟನೆ ಬೆಟ್ಟದಲ್ಲಿಯ ಬಟ್ಟಬಯಲ ಕದಳಿಯ ಹೋಗಿ ಬಟ್ಟಬಯಲಾಗಿ, ಜಗದಂತರ್ಯಾಮಿ ಕಪಿಲಸಿದ್ಧಮಲ್ಲಿಕಾರ್ಜುನನಾಗಿ ನಿಂದೆಯಲ್ಲಾ ಅಲ್ಲಮದೇವಾ
--------------
ಸಿದ್ಧರಾಮೇಶ್ವರ
`ಸರ್ವಂ ಖಲ್ವಿದಂ ಬ್ರಹ್ಮ' ಎಂದುದು ವೇದ. `ತ್ವಮೇವ ಬ್ರಹ್ಮ ನಾನ್ಯಾತೋಸ್ಮಿನ್' ಎಂದುದು ವೇದ. `ನಾನ್ಯಾತೋಸ್ಮಿನ್ ದೃಷ್ಟಾ' ಎಂದುದು ವೇದ. `ನಾನ್ಯತ್ ಕಿಂಚಿದ್ ವಿದ್ಯತೇ' ಎಂದುದು ವೇದ. `ನ ಕರ್ಮಣಾ ಲಿಪ್ಯತೇ' ಎಂದುದು ವೇದ. ತನ್ನಿಂದನ್ಯವೇನೂ ಇಲ್ಲವೆಂದರಿದರಿವು ಸಚ್ಚಿದಾನಂದಸ್ವರೂಪಮಪ್ಪ ನಿಜವು ನೀನೆ, ಸಿಮ್ಮಲಿಗೆಯ ಚೆನ್ನರಾಮಾ.
--------------
ಚಂದಿಮರಸ
ಕಾಯದ ಜನನಸ್ಥಾನ ಅಷ್ಟತನುವಿನ ಕೊನೆಯ ಮೊನೆಯಲ್ಲಿ, ವಾ[ಕಿ]ನ ಜನನಸ್ಥಾನ ಮನದ ಕೊನೆಯ ಮೊನೆಯಲ್ಲಿ, ಮನದ ಜನನಸ್ಥಾನ ಚಿತ್ತಿನ ಕೊನೆಯ ಮೊನೆಯಲ್ಲಿ, ಚಿತ್ತಿನ ಜನನಸ್ಥಾನ ಆತ್ಮನ ಕೊನೆಯ ಮೊನೆಯಲ್ಲಿ, ಸೌರಾಷ್ಟ್ರ ಸೋಮೇಶ್ವರನ ಜನನಸ್ಥಾನ ``ಸರ್ವಂ ಖಲ್ವಿದಂ ಬ್ರಹ್ಮ ಎಂಬಲ್ಲಿ.
--------------
ಆದಯ್ಯ
ಜಗಭರಿತಲಿಂಗ ಶರಣಭರಿತಲಿಂಗ ನಾಮರಹಿತಲಿಂಗ: ಜಗಭರಿತಲಿಂಗವೆಂದು, `ಸರ್ವಂ ಖಲ್ವಿದಂ ಬ್ರಹ್ಮ' ವೆಂಬ ವಿಶ್ವಬ್ರಹ್ಮ. ಶರಣಭರಿತಲಿಂಗವೆಂದು, `ಏಕ ಏವ ದೇವೋ ನ ದ್ವಿತೀಯಃ' ವೆಂಬ ತಾರಕಬ್ರಹ್ಮ. ನಾಮರಹಿತಲಿಂಗವೆಂದು, `ಚಕಿತಮಬ್ಥಿಧತ್ತೇ ಶ್ರುತಿರಪಿ' ಯೆಂಬ ಪರಬ್ರಹ್ಮ. ಇಂತೀ ತ್ರಿವಿಧಬ್ರಹ್ಮ ಏಕಬ್ರಹ್ಮ ನೀನೇ ಸೌರಾಷ್ಟ್ರ ಸೋಮೇಶ್ವರಾ.
--------------
ಆದಯ್ಯ
ಕೈವಲ್ಯ ವೈಕುಂಠ ಮೋಕ್ಷಗಾಮಿನಿಗಳಪ್ಪ ತೆರನ ತಿಳಿವುದಕ್ಕೆ ಶೈವ ವೈಷ್ಣವ ಅಧ್ಯಾತ್ಮ ತ್ರಿವಿಧಕರ್ಮಂಗಳಲ್ಲಿ ಷಡ್ದರ್ಶನ ಸಂಪದವಾಯಿತ್ತು. ಈ ಭೇದ ವಿಭೇದವಾದಲ್ಲಿ ಶಕ್ತಿರೂಪು ವೈಷ್ಣವ ಅಸ್ತಿಭೇದ ಶಿವಾಧಿಕ್ಯ, ಉಭಯಚೇತನ ವಸ್ತುವಾಗಿ ಘಟ ಬುಡಂಗಳಲ್ಲಿ ಚರಸ್ಥಾವರಂಗಳಲ್ಲಿ ಖಲ್ವಿದಂ ಬ್ರಹ್ಮ ವಸ್ತುಮೂರ್ತಿ ಅಳಿವು ಉಳುಮೆಗೆ ತೆರಪಿಲ್ಲದ ಸಂಗ ವೀರಶೈವ. ವಿ ಎಂಬ ಯುಕ್ತಿ, ರ ಎಂಬ ರಜಸ್ಸು, ವ ಎಂಬ ಬಿಂದುವಿನ ಶಾಖೆ ನಿಂದಲ್ಲಿ ಲೀಯಲ್ಪಟ್ಟುದು ಕೂಟಸ್ಥ ಗೋಳಕಾಕಾರ. ಅದು ಪಂಚಾಕ್ಷರೀ ಪ್ರಣಮ, ಷಡಕ್ಷರದ ಸದನ. ಏಕಾಕ್ಷರದ ಲೇಖನವಳಿದ ಅಲೇಖ. ಅಯಿವತ್ತೆರಡನೆಯ ಸರಹರಿದ ಸಂಬಂಧ. ಇದು ಸ್ವಯ ಚರ ಪರದ ಸುಮುದ್ರೆ. ಶ್ರುತಿಸ್ಮೃತಿತತ್ವದ ಶೋಧನೆ. ಆ ಗುಣ ಪ್ರಸನ್ನವಪ್ಪ ಚನ್ನಬಸವಣ್ಣಪ್ರಿಯ ಭೋಗಮಲ್ಲಿಕಾರ್ಜುನಲಿಂಗದ ಲೀಲಾಭಾವ.
--------------
ಪ್ರಸಾದಿ ಭೋಗಣ್ಣ
ನಾದಬ್ರಹ್ಮ ನಾದಾತೀತಬ್ರಹ್ಮ ಶಬ್ದಬ್ರಹ್ಮ ನಿಶ್ಶಬ್ದಬ್ರಹ್ಮ ವಿಶ್ವಬ್ರಹ್ಮ ಏಕಬ್ರಹ್ಮ ಸರ್ವಂ ಖಲ್ವಿದಂ ಬ್ರಹ್ಮ. ಇದಕ್ಕೆ ಶ್ರುತಿ: ನಾದಬ್ರಹ್ಮಮಯೋ ದೇವೋ ನಾದಾತೀತಂತು ತತ್ಪದಂ ಶಬ್ದಬ್ರಹ್ಮಮಯಂ ಸರ್ವಂ ನಿಶ್ಶಬ್ದಾ ಬ್ರಹ್ಮವೇದಿನಃ ವಿಶ್ವಬ್ರಹ್ಮಪ್ರವರ್ತಂತೇ ಏಕಂ ಬ್ರಹ್ಮ ಚ ಸುಧ್ರುವಂ ಸರ್ವಂ ಖಲ್ವಿದಂ ಬ್ರಹ್ಮ ಸರ್ವಾತೀತೋ ಮಹಾಪ್ರಭುಃ ಇಂತೆಂದುದಾಗಿ ಒಂದಹುದು ಒಂದನಲ್ಲವೆಂದಡೆ, ಶಿರ ತನ್ನದು ದೇಹ ಮತ್ತೊಬ್ಬರದೆಂದಡೆ, ಮೆಚ್ಚುವರೆ ಶಿವಜ್ಞಾನಿಗಳು? ಸೌರಾಷ್ಟ್ರ ಸೋಮೇಶ್ವರಲಿಂಗವನಹುದಲ್ಲವೆಂಬರೆ ಬಲ್ಲವರುರಿ
--------------
ಆದಯ್ಯ
ಇಂತು ಪಂಚಪ್ರಣವ ನಿರೂಪಣಾನಂತರದಲ್ಲಿ ಬ್ರಹ್ಮಭೇದವಿಧಿಯಂ ಪೇಳ್ವೆನೆಂತೆನೆ- ಬ್ರಹ್ಮವೆಂದೊಡೆ ದೊಡ್ಡಿತ್ತಹತನದಿಂದೆಯುಂ ಪೂರ್ಣವಹಣದಿಂದೆಯುಂ `ಸರ್ವಂ ಖಲ್ವಿದಂ ಬ್ರಹ್ಮ'ವೆಂಬ ವಚನಾರ್ಥ ಸಾರ್ಥಕವಾಗಿಯಾ ಆದ್ವಿತೀಯ ಶಿವತತ್ವ ಬ್ರಹ್ಮವೆ ಪಂಚಪ್ರಕಾರವಾದವಾ ಪಂಚಬ್ರಹ್ಮವೊಂದೊಂದೈದೈದಾಗುತ್ತಿರ್ಪತ್ತೈದಾದುದೆಂತೆನೆ ಮೂರ್ತಿಬ್ರಹ್ಮ, ತತ್ವಬ್ರಹ್ಮ, ಭೂತಬ್ರಹ್ಮ ಪಿಂಡಬ್ರಹ್ಮ, ಕಲಾಬ್ರಹ್ಮಗಳೆಂಬೀವೈದುಂ ಪಂಚಬ್ರಹ್ಮಂಗಳಿವಕ್ಕೆ ವಿವರವೆಂತೆನೆ ಅಕಾರೋಕಾರಮಕಾರಾಧಿದೇವತೆಗಳಾದ ಸೃಷ್ಟಿಸ್ಥಿತ್ಯಂತ್ಯಕಾರಿಗಳಾದ ಬ್ರಹ್ಮ ವಿಷ್ಣು ರುದ್ರರುಂ ಸಾಕಲ್ಯಾದಿ ಪಂಚಪ್ರಣವಾಂಗರೂಪ ಸಮಸ್ತಾಕ್ಷರಂಗಳು- ಮಿವೆಲ್ಲವಾದ ಬ್ರಹ್ಮ ಸಂಜ್ಞಿತವಾದ ಹಕಾರಾಂತಸ್ಥವಾದುದರಿಂದೀ ಸರ್ವವುಂ ಮೂರ್ತಿಬ್ರಹ್ಮವೆನಿಕುಂ. ಮತ್ತವಿೂ ತ್ರಿವರ್ಣಸಂಭೂತವಾದ ಸಮಸ್ತ ವರ್ಣತತ್ವಂಗಳ್ಗೆಯು ಶಿವತತ್ವವೆ ಪ್ರಭುವಾದುದರಿಂ ಶಿವಬೀಜ ಸಂಜ್ಞಿತವಾದ ಹ ಎಂಬ ಶುದ್ಧ ಪ್ರಸಾದಾಧ್ಯಾತ್ಮಪ್ರಸಾದಾಂತವಾದ ಪಂಚಪ್ರಸಾದಮಂತ್ರವೆ ತತ್ವಬ್ರಹ್ಮವೆನಿಕುಂ. ಬಳಿಕ್ಕಂ ಮಾಂಸ ಸಂಜ್ಞಿತವಾದ ಲಕಾರವೆ ಪೃಥ್ವೀಭೂತ ಬೀಜಂ. ಮೇದಸ್ಸಂಜ್ಞಿತವಾದ ವಕಾರವೆ ಜಲಭೂತ ಬೀಜಂ. ಷಷ* ್ಯ ಸಂಜ್ಞಿತವಾದ ರಕಾರವೆ ತೇಜೋಭೂತ ಬೀಜಂ. ಸಪ್ತಮಸಂಜ್ಞಿತವಾದ ಹಕಾರವೆ ಆಕಾಶಭೂತ ಬೀಜವೀ ಪ್ರಕಾರದಿಂ ಪಂಚಭೂತಾತ್ಮಕವಾದುದೆ ಭೂತಬ್ರಹ್ಮವೆನಿಕುಂ. ಮರಲ್ದುಂ, ಪ್ರಕೃತಿಸಂಜ್ಞಿತವಾದ ಅ ಇ ಉ ಋ ಒ ಎ ಒಯೆಂಬೀ ಪ್ರಕೃತಿಗಳಲ್ಲಿ ಋ ಒ ದ್ವಯಂಮಂ ಬಿಟ್ಟುಳಿದ ಅ ಇ ಉ ಎ ಒ ಯೆಂಬೀಯೈದಕ್ಕರಮಂ ಪಂಚಸಂಜ್ಞಿತವಾದ ಹಕಾರದೊಡನೆ ಕೂಡೆ, ಬಿಂದುನಾದ ಸೌಂಜ್ಞಿತವಾದ ಸೊನ್ನೆಯೊಳ್ಬೆಸೆ, ಹ್ರಂ ಹ್ರೀಂ ಹ್ರುಂ ಹ್ರೇಂ ಹ್ರೌಂ ಎಂಬೀ ಬ್ರಹ್ಮಬೀಜಂಗಳೈದಂ ಪೇಳ್ದು, ಮತ್ತವಿೂ ಬೀಜಗಳೊಳ್ವಾಚಕವಾದ ಪಂಚಬ್ರಹ್ಮಂಗಳಂ ಪೇಳ್ವೆನೆಂತೆನೆ- ಸದ್ಯೋಜಾತ ವಾಮದೇವಾಘೋರ ತತ್ಪುರುಷೇಶಾನಂಗಳೆಂಬಿವೆ ಪಂಚಬ್ರಹ್ಮಂಗಳಿವಕ್ಕೆ ಪ್ರಣವವಾದಿಯಾಗಿ ನಮಃ ಪದಂ ಕಡೆಯಾಗಿ ಚತುಥ್ರ್ಯಂತಮಂ ಪ್ರಯೋಗಿಸೆ ಆ ಪಂಚಬ್ರಹ್ಮ ಮಂತ್ರೋದ್ಧರಣೆಯಾದುದೆಂತನೆ- ಓಂ ಹ್ರಂ ಸದ್ಯೋಜಾತಾಯ ನಮಃ ಓಂ ಹ್ರೀಂ ವಾಮದೇವಾಯ ನಮಃ ಓಂ ಹ್ರುಂ ಅಘೋರಾಯ ನಮಃ ಓಂ ಹ್ರೇಂ ತತ್ಪುರುಷಾಯ ನಮಃ ಓಂ ಹ್ರೌಂ ಈಶಾನಾಯ ನಮಃ ಎಂದು ಶಿವಬೀಜದೋಳ್ವೀವ ಪ್ರಕೃತಿ ಪಂಚಾಕ್ಷರಂಗಳಂ ಕೂಡಿಸಿ ಸಬಿಂದುವಾಗುಚ್ಚರಿಸೆ, ಪಂಚಬ್ರಹ್ಮವೆನಿಸಿದ ಕರ್ಮಸಾದಾಖ್ಯ ಸ್ವರೂಪಮೆ ಪಿಂಡಬ್ರಹ್ಮವೆನಿಕುಂ. ಮತ್ತಂ, ಪಿಂಡಬ್ರಹ್ಮವೆಂಬ ಪಂಚಬ್ರಹ್ಮ ನಿರೂಪಣಾನಂತರದಲ್ಲಿಯಾ ಪಂಚಬ್ರಹ್ಮಮಂತ್ರಕ್ಕೆ ಮೂವತ್ತೆಂಟು ಕಳೆಗಳುಂಟದೆಂತೆನೆ- ಈಶಾನ ತತ್ಪುರುಷಾಘೋರ ವಾಮದೇವ ಸದ್ಯೋಜಾತಂಗಳಿವಕ್ಕೆ ವಿವರಂ ಈಶಾನಕ್ಕೆದು ಕಲೆ. ತತ್ಪುರುಷಕ್ಕೆ ನಾಲ್ಕು ಕಲೆ. ಅಘೋರಕ್ಕೆಂಟು ಕಲೆ. ವಾಮದೇವಕ್ಕೆ ಪದಿರ್ಮೂಕಲೆ. ಸದ್ಯೋಜಾತಕ್ಕೆಂಟು ಕಲೆ. ಅಂತು, ಮೂವತ್ತೆಂಟು ಕಲೆ. ಇವಕ್ಕೆ ವಿವರಂ, ಮೊದಲೀಶಾನಕ್ಕೆ- `ಈಶಾನಸ್ಸರ್ವ ವಿದ್ಯಾನಾಂ' ಇದು ಮೊದಲ ಕಲೆ. `ಈಶಾನಾಸ್ಸರ್ವ ಭೂತಾನಾಂ' ಇದೆರಡನೆಯ ಕಲೆ. `ಬ್ರಹ್ಮಣಾಧಿಪತಿ ಬ್ರಹ್ಮಣಾಧಿಪತಿ ಬ್ರಹ್ಮ' ಇದು ಮೂರನೆಯ ಕಲೆ. `ಶಿವೋಮೇಸ್ತು' ಇದು ನಾಲ್ಕನೆಯ ಕಲೆ. `ಸದಾ ಶಿವೋಂ' ಇದು ಐದನೆಯ ಕಲೆ. ತತ್ಪುರುಷಕ್ಕೆ- `ತತ್ಪುರುಷಾಯ ವಿದ್ಮಹೆ' ಇದು ಮೊದಲ ಕಲೆ. `ಮಹಾದೇವಾಯ ಧೀಮಹಿತನ್ನೋ' ಇದೆರಡನೆಯ ಕಲೆ. `ರುದ್ರಃ' ಇದು ಮೂರನೆಯ ಕಲೆ. `ಪ್ರಚೋದಯಾತ್' ಇದು ನಾಲ್ಕನೆಯ ಕಲೆ. ಅಘೋರಕ್ಕೆ `ಅಘೋರೇಭ್ಯಃ' ಇದು ಮೊದಲ ಕಲೆ. `ಘೋರೇಭ್ಯಃ' ಇದು ಎರಡನೆಯ ಕಲೆ. `ಘೋರಘೋರ' ಇದು ಮೂರನೆಯ ಕಲೆ. `ತರೇಭ್ಯ' ಇದು ನಾಲ್ಕನೆಯ ಕಲೆ. `ಸರ್ವತಃ' ಇದೈದನೆಯ ಕಲೆ. `ಸರ್ವ' ಇದಾರನೆಯ ಕಲೆ. `ಸರ್ವೇಭ್ಯೇ ನಮಸ್ತೇಸ್ತು' ಇದೇಳನೆಯ ಕಲೆ. `ರುದ್ರ ರೂಪೇಭ್ಯಃ' ಇದೆಂಟನೆಯ ಕಲೆ. ವಾಮದೇವಕ್ಕೆ- `ವಾಮದೇವಾಯ' ಇದು ಮೊದಲ ಕಲೆ. `ಜೇಷಾ*ಯ' ಇದೆರಡನೆಯ ಕಲೆ. `ರುದ್ರಾಯ ನಮಃ' ಇದು ಮೂರನೆಯ ಕಲೆ. `ಕಲಾಯ' ಇದು ನಾಲ್ಕನೆಯ ಕಲೆ. `ಕಲಾ' ಇದೈದನೆಯ ಕಲೆ. `ವಿಕರಣಾಯ ನಮಃ' ಇದಾರನೆಯ ಕಲೆ. `ಬಲಂ' ಇದೇಳನೆಯ ಕಲೆ. `ವಿಕರಣಾಯ' ಇದೆಂಟನೆಯ ಕಲೆ. `ಬಲಂ' ಇದೊಂಬತ್ತನೆಯ ಕಲೆ. `ಪ್ರಮಥನಾಥಾಯ' ಇದು ಪತ್ತನೆಯ ಕಲೆ. `ಸರ್ವಭೂತ ದಮನಾಯ ನಮಃ' ಇದು ಪನ್ನೊಂದನೆಯ ಕಲೆ `ಮನ' ಇದು ಪನ್ನೆರಡನೆಯ ಕಲೆ. `ಉನ್ಮನಾಯ' ಇದು ಪದಿಮೂರನೆಯ ಕಲೆ. ಸದ್ಯೋಜಾತಕ್ಕೆ- `ಸದ್ಯೋಜಾತಂ ಪ್ರಪದ್ಯಾಮಿ' ಇದು ಮೊದಲ ಕಲೆ. `ಸದ್ಯೋಜಾತಾಯವೈ ನಮಃ' ಇದೆರಡನೆಯ ಕಲೆ. `ಭವೆ' ಇದು ಮೂರನೆಯ ಕಲೆ. `ಭವೇ' ಇದು ನಾಲ್ಕನೆಯ ಕಲೆ. `ನಾತಿಭವೆ' ಇದೈದನೆಯ ಕಲೆ. `ಭವಸ್ವ ಮಾಂ' ಇದಾರನೆಯ ಕಲೆ. `ಭವ' ಇದೇಳನೆಯ ಕಲೆ. `ಉದ್ಭವ' ಇದೆಂಟನೆಯ ಕಲೆ. ಇದು ಕಲಾಬ್ರಹ್ಮವಿಂತು ಮೂರ್ತಿಬ್ರಹ್ಮ ತತ್ವಬ್ರಹ್ಮ ಭೂತಬ್ರಹ್ಮ ಪಿಂಡಬ್ರಹ್ಮ ಕಲಾಬ್ರಹ್ಮಗಳೆಂಬ ಪಂಚಬ್ರಹ್ಮಗಳಂ ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.
--------------
ಇಮ್ಮಡಿ ಮುರಿಘಾ ಗುರುಸಿದ್ಧ / ಗುರುಸಿದ್ಧಸ್ವಾಮಿ
`ಸರ್ವಂ ಖಲ್ವಿದಂ ಬ್ರಹ್ಮ' ಎಂಬುದ ಅರಿದ ಬಳಿಕ, ಲಿಂಗದಲ್ಲಿ ಶಿಲೆಯ ಭಾವವನರಸಲುಂಟೆ? `ಸರ್ವಂ ಖಲ್ವಿದಂ ಬ್ರಹ್ಮ' ಎಂದರಿದ ಬಳಿಕ, ಗುರುವಿನಲ್ಲಿ ನರನ ಭಾವವನರಸಲುಂಟೆ? `ಸರ್ವಂ ಖಲ್ವಿದಂ ಬ್ರಹ್ಮ' ಎಂದರಿದ ಬಳಿಕ ಮಾಯಾಮಯ ಸಂಸಾರವೆಂದರಸಲುಂಟೆ? `ಸರ್ವಂ ಖಲ್ವಿದಂ ಬ್ರಹ್ಮ' ಎಂದರಿದ ಬಳಿಕ, ನಾನು ಜೀವಿ, ನಾನು ಜಡ, ನಾನು ಬದ್ಧನೆಂದರಸಲುಂಟೆ? ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
ಶ್ರುತಿ ಸ್ಮøತಿ ಪುರಾಣಗಮೋಪನಿಷದ್ವಾಕ್ಯಂಗಳನರಿವರಲ್ಲದೆ, ಶ್ರುತ್ಯತೀತಮೂರ್ತಿಯನರಿದವರು ಒಬ್ಬರೂ ಇಲ್ಲ ನೋಡಯ್ಯಾ, `ಸರ್ವಂ ಖಲ್ವಿದಂ ಬ್ರಹ್ಮ' ಎಂದರಿದು ಮತ್ತೇನನರಿಯದೆ ಹೋದೆನಯ್ಯಾ, ನಿಮ್ಮ ಮಹಾಬಯಲಲ್ಲದೆ ಕಪಿಲಸಿದ್ಧಮಲ್ಲಿಕಾರ್ಜುನಾ.
--------------
ಸಿದ್ಧರಾಮೇಶ್ವರ
-->