ಅಥವಾ

ಒಟ್ಟು 3 ಕಡೆಗಳಲ್ಲಿ , 3 ವಚನಕಾರರು , 3 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶೀಲ ಶೀಲವೆಂದೇನೊ ? ಶೀಲವಂಥಾ ಸೂಲವೆ ? ಶುದ್ಧ ಹರಿವ ನೀರನು ನೂಲರಿವೆ ಸುತ್ತಿಯದ ಕಟ್ಟಿ ತಂದದ್ದು ಶೀಲವೆ ? ಅದಲ್ಲ ನಿಲ್ಲು ಮಾಣು. ಜ್ವಾಲೆಯಂದದಿ ಹರಿವ ಮನವನು ಖತಿ ಹೋಗದ ಹಾಗೆ ಕಟ್ಟಿ ನಿಲಿಸಿದುದೆ ಶೀಲ. ಬಾಲೆಯರ ಬಣ್ಣದ ಬಗೆಗೆ ಭ್ರಮೆಗೊಳ್ಳದುದೆ ಶೀಲ. ಕಾಲಕರ್ಮಂಗಳ ಗೆದ್ದುದೆ ಶೀಲ. ಇಂತಲ್ಲದೆ ಉಳಿದುವೆಲ್ಲ ದುಶ್ಶೀಲ ಕಾಣಾ ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಶಿವಸಾಕ್ಷಿಯಾಗಿ.
--------------
ಕುಷ್ಟಗಿ ಕರಿಬಸವೇಶ್ವರ
ಲಾಂಛನದೆಡೆಯಲ್ಲಿ ಹುಸಿಯ ಸಂಪಾದಿಸುವವ ಭಕ್ತನಲ್ಲ, ಹುರುಡುವಿಡಿದಾತ ಮಾಹೇಶ್ವರನಲ್ಲ, ಪದಪದಾರ್ಥ ನಾಸ್ತಿ ಪ್ರಸಾದಿಗೆ, ಖತಿ ನಾಸ್ತಿ ಪ್ರಾಣಲಿಂಗಿಗೆ, ಶರಣಂಗೆ ಸತಿ ನಾಸ್ತಿ, ಐಕ್ಯಂಗೆ ಪತಿ ನಾಸ್ತಿ. ಇಂತೀ ಷಡುಸ್ಥಲಂಗಳ ಸಕೀಲ ಸಂಯೋಗ ಸಂಬಂಧ, ಕೂಡಲಚೆನ್ನಸಂಗಮದೇವಾ ಸಾಧಕರಳವೆ ಸಹಜದ ಒಡೆಯರಿಗಲ್ಲದೆ ?
--------------
ಚನ್ನಬಸವಣ್ಣ
ಇತರನರಿಯದ ಇತರ ಮರೆಯದ ಪತಿವ್ರತಾಂಗನೆಯೆನಿಪ, ಖತಿ ಕೇಣಾದಿಗಳ ಜರಿದಿರವನುಳ್ಳ ಪರಮಭಕ್ತನ ಪರಿಯನೇನೆಂದುಪಮಿಸುವೆನಯ್ಯಾ? ಹತ್ತಿ ಹತ್ತಿ ಬಂದು ಸುತ್ತಲಿಕ್ಕಿ ಎತ್ತಿ ಮುಳುಗುವ ನಿತ್ಯಭಕ್ತಂಗೆ ನಮೋ ನಮೋ ಎಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.
--------------
ದೇಶಿಕೇಂದ್ರ ಸಂಗನಬಸವಯ್ಯ
-->