ಮತ್ತೆಯಮಗ್ನಿಮಂಡಲದ ಕುಬೇರದಿಕ್ಕಿನೇಕದಳದಲ್ಲಿ ಯಕಾರಮ
ನದರಾಚೆಯ ಚಂದ್ರಮಂಡಲ ದಳದ್ವಯದಲ್ಲಿ
ಕುಬೇರದಳದೊಳಗೆ ಬಕಾರಮಂ,
ಕುಬೇರೀಶಾನರಪದಿಕ್ಕಿನ ದಳದಲ್ಲಿ ಔಕಾರಮ
ನದರಾಚೆಯ ಸೂರ್ಯಮಂಡಲದ ದಳತ್ರಯದಲ್ಲಿ
ಕುಬೇರದಳದೊಳಗೆ ಧಕಾರಮಂ,
ಕುಬೇರೀಶಾನರಪದಿಕ್ಕಿನ ದಳದ್ವಯದಲ್ಲಿ
ನಕಾರಂಗಳನುದ್ಧರಿಪುದೆಂದು
ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.