ಅಥವಾ

ಒಟ್ಟು 5 ಕಡೆಗಳಲ್ಲಿ , 4 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆಸತ್ತೆ ಸಂಸಾರಸಂಗಕ್ಕೆ, ಬೇಸತ್ತೆ ಸಂಸಾರಸಂಗಕ್ಕೆ. ಸಂಸಾರಸಂಗದಿಂದ ಓಸರಿಸಿ ಒಯ್ಯನೆ ಕಂದಿ ಕುಂದಿ, ಭವಗಿರಿಯ ಸುತ್ತುತ್ತಿದ್ದೆನಯ್ಯಾ. ಅಯ್ಯಾ, ಅಯ್ಯಾ ಎಂದು ಒಯ್ಯನೆ ಒದರಿದರೆ `ಓ' ಎನ್ನಲೊಲ್ಲೇಕೆಲೊ ಅಯ್ಯ ? ನೀ ಪಡೆದ ಸಂಸಾರ ಸುಖ ದುಃಖ, ನೀನೆ ಬೇಗೆಯನಿಕ್ಕಿ, ನೀನೊಲ್ಲೆನೆಂದರೆ ನಾ ಬಿಡೆ, ನಾ ಬಿಡೆನಯ್ಯಾ ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
--------------
ಹೇಮಗಲ್ಲ ಹಂಪ
ನಾಭಿಮಂಡಲದೊಳಗೆ ಈರೈದು ಪದ್ಮದಳ, ಸದಮದ ಗಜಮಸ್ತಕದೊಳಗೆ ತೋರುತ್ತದೆ. ಅಕಾರ ಉಕಾರ ಮಕಾರ ಮರ್ಮಸ್ಥಾನ ತ್ರಿಕೂಟಸ್ಥಾನದ ಸಮರಸದ ಸುಖದಲ್ಲಿ ಬೆಳೆದ ಕಂದ ಮೂಲಾದಿಗಳ, ಹೊಸರಸದ ಅಮೃತವನು ಓಸರಿಸಿ, ದಣಿಯುಂಡ ತೃಪ್ತಿಯಿಂದ ಸುಖಿಯಾದೆನು ಗುಹೇಶ್ವರಾ.
--------------
ಅಲ್ಲಮಪ್ರಭುದೇವರು
ಶರಣಸತಿ ಲಿಂಗಪತಿಯೆಂದು ಆಚರಿಸುವ ಮಾಹೇಶ್ವರರ ಲಿಂಗ ಓಸರಿಸಿ ಹೋದಲ್ಲಿ, ಮಾಹೇಶ್ವರರ ಮಧ್ಯದಲ್ಲಿ ಮುಹೂರ್ತವ ಮಾಡಿಕೊಂಡು ಐಕ್ಯವಾಗುವ ಸಮಯದಲ್ಲಿ, ಆ ಲಿಂಗ ಸಿಕ್ಕಿದಡೆ, ತೆತ್ತಿಗರಾದವರು ಧರಿಸುವುದು. ಇದಲ್ಲದೆ ಸಂದೇಹವ ಮಾಡಿದಡೆ ನಾಯಕ ನರಕ. ನೀವೇ ಬಲ್ಲಿರಯ್ಯಾ, ಐಘಟದೂರ ರಾಮೇಶ್ವರ.
--------------
ಮೆರೆಮಿಂಡಯ್ಯ
ಸಾಸಿರದೆಂಟನೆಯ ದಳದಲ್ಲಿ ಖೇಚರಿ ಚಲ್ಲಣಗಟ್ಟಿ, ವಾಸುಗಿಯ ಫಣಾಮಣಿ ಪ್ರಜ್ವಲಿಸುವುದ ಕಂಡೆ. ಅಸುರರೆಲ್ಲ ತಮತಮಗಂಜಿ ಓಸರಿಸಿ ಮುಂದೆ ನಡೆವಲ್ಲಿ, ನಾಸಿಕ ಮನವ ಮುಸುಕುವುದ ಕಂಡೆ, ತಾ ಸುಖಸ್ವರೂಪನಾದ; ಸುಖ ಮುಖಪ್ರವೇಶದಿಂದ! ಗೋಸಾಸಿರ ನಡೆಗೆಟ್ಟವು ಗುಹೇಶ್ವರಾ, ನಿಮ್ಮುವ ನೆರೆದೆನಾಗಿ.
--------------
ಅಲ್ಲಮಪ್ರಭುದೇವರು
ಸಕಲ ಗಣಂಗಳು ಸಾಕ್ಷಿಯಾಗಿ ಶ್ರೀಗುರುದೇವನು ಕರಸ್ಥಲಕ್ಕೆ ಕರುಣಿಸಿಕೊಟ್ಟ ಇಷ್ಟಲಿಂಗದಲ್ಲಿ ನಿಷೆ*ನಿಬ್ಬೆರಗಾಗಿ, ಶರಣಸತಿ ಲಿಂಗಪತಿ ಭಾವಬಿಡದೆ ಆಚರಿಸುವ ಲಿಂಗವು ಓಸರಿಸಿ ಹೋದಡೆ, ಆ ಲಿಂಗದಲ್ಲಿ ತನ್ನ ಪ್ರಾಣತ್ಯಾಗವ ಮಾಡಬೇಕಲ್ಲದೆ ಜೀವನ ಕಕ್ಕುಲಾತಿಯಿಂದುಳಿಯಲಾಗದು. ಮರಳಿ ಮತ್ತೊಂದು ಲಿಂಗವ ಧರಿಸಲಾಗದು. ಅದೇನು ಕಾರಣವೆಂದಡೆ : ಕಾಷ*ದಲ್ಲಿ ಅಗ್ನಿಯಿರ್ಪುದಲ್ಲದೆ ಕರಿಗೊಂಡ ಇದ್ದಲಿಯಲ್ಲಿ ಅಗ್ನಿಯಿರ್ಪುದೇ ? ಇಂತೀ ದೃಷ್ಟದಂತೆ, ಮುನ್ನ ಗುರೂಪದೇಶವಿದ್ದ ದೇಹದಲ್ಲಿ ಶಿವಕಳೆಯಿರ್ಪುದಲ್ಲದೆ, ಗುರೂಪದೇಶವಾಗಿ ಲಿಂಗವ್ರತವನಾಚರಿಸಿ ಮರಳಿ ಲಿಂಗಬಾಹ್ಯ ವ್ರತಗೇಡಿಯಾದ ದೇಹದಲ್ಲಿ ಪರಮಶಿವಕಳೆಯೆಲ್ಲಿಯದೊ ? ಆ ಶಿವಕಳೆಯಿಲ್ಲದ ದೇಹಕ್ಕೆ ಮರಳಿ ಲಿಂಗಧಾರಣವಾದಡೆಯು ಆ ಲಿಂಗ ಪ್ರೇತಲಿಂಗವು ; ಅವ ಭೂತಪ್ರಾಣಿ. ಆ ಲಿಂಗದ ಪೂಜೆಯ ಎಷ್ಟು ದಿನ ಮಾಡಿದಡೆಯು ಫಲವಿಲ್ಲ; ಮುಂದೆ ಮುಕ್ತಿಯಿಲ್ಲ. ಅವಗೆ ರಾಜನರಕ ಪ್ರಾಪ್ತಿಯಾಗಿರ್ಪುದು ನೋಡಾ. ಇದಕ್ಕೆ ಸಾಕ್ಷಿ: ``ಲಿಂಗಬಾಹ್ಯಾತ್ ವ್ರತಭ್ರಷ್ಟಃ ಪುನರ್ಲಿಂಗಂ ನ ಧಾರಯೇತ್ | ತತ್‍ಪೂಜಾ ನಿಷ್ಫಲಾ ಚೈವ ರೌರವಂ ನರಕಂ ವ್ರಜೇತ್ || ಮತ್ತಂ, ``ಪ್ರೇತಲಿಂಗೇನ ಸಂಸ್ಕಾರೇ ಭೂತಪ್ರಾಣೇ ನ ಜಾಯತೇ | ಪ್ರಭಾತೇ ತನ್ಮುಖಂ ದೃಷ್ಟ್ವಾ ಕೋಟಿ ಜನ್ಮಸು ಸೂಕರಃ ||'' ಎಂದುದಾಗಿ, ಇಂತಪ್ಪ ಲಿಂಗಬಾಹ್ಯ ವ್ರತಭ್ರಷ್ಟನ ಮುಖವ ಪ್ರಾತಃಕಾಲದಲ್ಲಿ ನೊಡಿದಾತಂಗೆ ಕೋಟಿವೇಳೆ ಶುನಿ ಸೂಕರನ ಬಸುರಲ್ಲಿ ಬಪ್ಪುದು ತಪ್ಪದು ನೋಡಾ ಅಖಂಡೇಶ್ವರಾ.
--------------
ಷಣ್ಮುಖಸ್ವಾಮಿ
-->