ಅಥವಾ

ಒಟ್ಟು 3 ಕಡೆಗಳಲ್ಲಿ , 2 ವಚನಕಾರರು , 2 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಳಿಯ ಹೊಲದ ಓಣಿಯ ದಾರಿಯಲ್ಲಿ ಮೂವರು ಕಳ್ಳರು ಕಟ್ಟಿ ಬೆಳ್ಳನೊಬ್ಬನ ಆ ಕಳ್ಳರು ಹಿಡಿಯಲಾಗಿ ಬೆಳ್ಳನ ಬೆಳುವೆ ತಾಗಿ, ಕಳ್ಳರು ಮೈಮರೆದು, ಮೂರು ಹಳ್ಳದಲ್ಲಿ ಬಿದ್ದರು. ಬಿದ್ದು ಸಾವರ ಕೊಲ್ಲಲೊಲ್ಲದೆ ಬೆಳ್ಳನಲ್ಲಿಯೆ ಅಡಗಿದ. ಅಡಗಿದವನಾರೆಂದರಿ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಊರಿಗೆ ಹೋ[ಹಾಗ] ಓಣಿಯ ಇಕ್ಕೆಲದ ದಾರಿಯಲ್ಲಿ ಕಟ್ಟಿದ ಕಳ್ಳರ ದಂಡೆ. ಅವರ ವರ್ಣ; ಒಬ್ಬ ಕಪೋತ, ಒಬ್ಬ ಕೃಷ್ಣ. ಕಪೋತನ ಕಾಲ ಹೊಯ್ದು, ಕೃಷ್ಣನ ಕುತ್ತಿ ಕೆಡಹಿ, ಮತ್ತೆ ಹೋಗುತ್ತಿರಲಾಗಿ, ಓಣಿಯ ತಪ್ಪಲ ತಲಹದಲ್ಲಿ ಕಟ್ಟಿದ್ದನೊಬ್ಬ ಕಳ್ಳ. ಅವನ ಕಂಡು ಕೂಗುವಡೆ ಬಾಯಿಲ್ಲ, ಹೊಯ್ವಡೆ ಕೈದಿಲ್ಲ. ಮೀರಿ ಹೋದಹೆನೆಂದಡೆ ಹಾದಿಗೆ ಹೊಲಬಿಲ್ಲ. ಇದು ಅವನ ಕೌತುಕವೋ? ಎನ್ನ ಭಾವದ ಭ್ರಮೆಯೋ? ಮುಂದಣವನ ಸುದ್ದಿ [ಯ] ಹಿಂಗಿ ಹೇಳಾ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
-->