ಅಥವಾ

ಒಟ್ಟು 18 ಕಡೆಗಳಲ್ಲಿ , 1 ವಚನಕಾರರು , 17 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಥ ಬ್ರಹ್ಮಾಂಡವ ಐವತ್ತೊಂಬತ್ತುಸಾವಿರದ ಐನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅಜವೆಂಬ ಭುವನ. ಆ ಭುವನದೊಳು ಅಜಕಪಾಲಿಯೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾ ತೊಂಬತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಇನ್ನೂರಾ ತೊಂಬತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಆಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ತಾರುಲಕ್ಷದ ಮೇಲೆ ಸಾವಿರದಾ ಐನೂರಾ ಐವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಜಟಾಧರವೆಂಬ ಭುವನ. ಆ ಭುವನದೊಳು ಜಟಾಜೂಟನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರಾ ಎಪ್ಪತ್ತೈದುಕೋಟಿ ಇಂದ್ರ ಬ್ರಹ್ಮ ನಾರಾಯಣ ರುದ್ರರಿಹರು. ಏಳುನೂರಾ ಎಪ್ಪತ್ತೈದುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ತೊಂಬತ್ತು ಲಕ್ಷದ ಮೇಲೆ ಸಾವಿರದಾ ಐನೂರಾ ಎಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ನಿಧೀಶವೆಂಬ ಭುವನ. ಆ ಭುವನದೊಳು ಭೂತೇಶನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳನೂರಾತೊಂಬತ್ತುಕೋಟಿ ಇಂದ್ರ-ಬ್ರಹ್ಮ-ನಾರಾಯಣ-ರುದ್ರರಿಹರು. ಏಳುನೂರಾತೊಂಬತ್ತುಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಅರುವತ್ತುಸಾವಿರದ ಐನೂರಾ ತೊಂಬತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಉಮಾಪತಿಯೆಂಬ ಭುವನ. ಆ ಭುವನದೊಳು ಉಮಾಸಹಿತನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರುಕೋಟಿ ನಾರಾಯಣ-ಬ್ರಹ್ಮ-ರುದ್ರಾದಿಗಳಿಹರು. ಮುನ್ನೂರುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ನಾಲ್ಕು ಲಕ್ಷದ ಮೇಲೆ ಸಾವಿರದ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಕುರುಕ್ಷೇತ್ರವೆಂಬ ಭುವನ. ಆ ಭುವನದೊಳು ರೌದ್ರನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರಾ ಹದಿನೈದುಕೋಟಿ ನಾರಾಯಣ-ಬ್ರಹ್ಮ ರುದ್ರಾದಿಗಳಿಹರು ನೋಡಾ. ಐನೂರಾ ಹದಿನೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ತೆರಡುಲಕ್ಷದ ಮೇಲೆ ಸಾವಿರದಾ ಐನೂರಾ ಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಪ್ರಕಾಮದವೆಂಬ ಭುವನ. ಆ ಭುವನದೊಳು ಪ್ರನಾಥನೆಂಬ ಮಹಾರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರಾ ಐವತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಏಳುನೂರಾ ಐವತ್ತೈದುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳು ಇಂದ್ರಚಂದ್ರಾದಿತ್ಯರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ತೆಂಟುಸಾವಿರದ ಐನೂರಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮಂಗಳವೆಂಬ ಭುವನ. ಆ ಭುವನದೊಳು ಅನಂತಗುಣರೂಪನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾತೊಂಬತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ. ಇನ್ನೂರಾತೊಂಬತ್ತುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ತೇಳುಸಾವಿರದ ಐನೂರಾ ಅರವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಭವ್ಯವೆಂಬ ಭುವನ. ಆ ಭುವನದೊಳು ನೀಲಲೋಹಿತನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾ ಎಂಬತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು. ಇನ್ನೂರಾ ಎಂಬತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಎಂಟುಲಕ್ಷದ ಮೇಲೆ ಸಾವಿರದ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಮಧ್ಯಮೇಶ್ವರನೆಂಬ ಭುವನ. ಆ ಭುವನದೊಳು ಕಾಲಕಾಲನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಐನೂರ ಮೂವತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು. ಐನೂರಾ ಮೂವತ್ತೈದುಕೋಟಿ ಚಂದ್ರಾದಿತ್ಯರು ಇಂದ್ರರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ತೇಳುಲಕ್ಷದ ಮೇಲೆ ಸಾವಿರದಾ ಐನೂರಾ ಅರುವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಸೌಮ್ಯದೇಹವೆಂಬ ಭುವನ. ಆ ಭುವನದೊಳು ಪ್ರಳಯಕಾಲನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರೆಂಬತ್ತು ಕೋಟಿ ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ. ಏಳುನೂರೆಂಬತ್ತು ಕೋಟಿ ಇಂದ್ರ-ಬ್ರಹ್ಮ-ನಾರಾಯಣ ರುದ್ರರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ತೆಂಟುಲಕ್ಷದ ಮೇಲೆ ಸಾವಿರದಾ ಐನೂರಾ ಎಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಧನ್ಯರೂಪವೆಂಬ ಭುವನ. ಆ ಭುವನದೊಳು ಪ್ರಳಯಕಾಲನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರೆಂಬತ್ತೈದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಏಳುನೂರೆಂಬತ್ತೈದುಕೋಟಿ ಇಂದ್ರ-ಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ತೈದುಸಾವಿರದ ಐನೂರಾ ನಲವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಅನಂತವೆಂಬ ಭುವನ. ಆ ಭುವನದೊಳು ಅನಂತಾನಂತನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರಾ ಎಪ್ಪತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು. ಇನ್ನೂರಾ ಎಪ್ಪತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ತೊಂದುಲಕ್ಷದ ಮೇಲೆ ಸಾವಿರದಾ ಐನೂರಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು ಸರ್ವವಿದ್ಯಾಧಿಪವೆಂಬ ಭುವನ. ಆ ಭುವನದೊಳು ಸರ್ವಜ್ಞನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರೈವತ್ತು ಕೋಟಿ ದೇವರ್ಕಳು ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರಿಹರು ನೋಡಾ. ಏಳುನೂರೈವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ತುನಾಲ್ಕುಲಕ್ಷದ ಮೇಲೆ ಸಾವಿರದ ಐನೂರಾ ಮೂವತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಶ್ರೀಧರವೆಂಬ ಭುವನ. ಆ ಭುವನದೊಳು ಅನಂತಗುಣರೂಪನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರಾ ಅರವತ್ತೈದುಕೋಟಿ ಬ್ರಹ್ಮ-ನಾರಾಯಣ-ರುದ್ರರಿಹರು. ಏಳುನೂರಾ ಅರವತ್ತೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಐವತ್ಮೂರುಲಕ್ಷದ ಮೇಲೆ ಸಾವಿರದಾ ಐನೂರಾ ಇಪ್ಪತ್ತೆಂಟು ಬ್ರಹ್ಮಾಂಡವನೊಳಕೊಂಡುದೊಂದು ಪ್ರಸೀದನವೆಂಬ ಭುವನ. ಆ ಭುವನದೊಳು ಅಖಿಲಾಂಡಕೋಟಿಬ್ರಹ್ಮಾಂಡನಾಯಕನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಏಳುನೂರಾ ಅರವತ್ತುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಏಳುನೂರಾ ಅರವತ್ತುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->