ಅಥವಾ

ಒಟ್ಟು 6 ಕಡೆಗಳಲ್ಲಿ , 1 ವಚನಕಾರರು , 4 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಂಥ ಬ್ರಹ್ಮಾಂಡವ ಎಂಬತ್ತೆರಡು ಲಕ್ಷದ ಮೇಲೆ ಸಾವಿರದಾಯೆಂಟುನೂರಹದಿನೆಂಟು ಬ್ರಹ್ಮಾಂಡವನೊಳಕೊಂಡುದೊಂದು ಲೋಹಿತವೆಂಬ ಭುವನ. ಆ ಭುವನದೊಳು ವ್ಯಾಘ್ರಪಾದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಒಂಬತ್ತುನೂರಾ ಐದುಕೋಟಿ ರುದ್ರ ಬ್ರಹ್ಮ ನಾರಾಯಣರಿಹರು. ಒಂಬತ್ತುನೂರಾ ಐದುಕೋಟಿ ವೇದಪುರುಷರು ಮುನೀಂದ್ರರು ಇಂದ್ರಚಂದ್ರಾದಿತ್ಯರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ನಾಲ್ವತ್ತೊಂದುಸಾವಿರದನೂರಾಯೆಂಟು ಬ್ರಹ್ಮಾಂಡವನೊಳಕೊಂಡುದೊಂದು ಏಕವೆಂಬ ಭುವನ. ಆ ಭುವನದೊಳು ಏಕೀಶನನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಇನ್ನೂರ ಐದುಕೋಟಿ ಬ್ರಹ್ಮ ನಾರಾಯಣ ರುದ್ರರು, ಇಂದ್ರಚಂದ್ರಾದಿತ್ಯರು, ಇನ್ನೂರೈದುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಅರವತ್ತೊಂದುಸಾವಿರದ ಆರುನೂರಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು ಏಕಧೀರವೆಂಬ ಭುವನ. ಆ ಭುವನದೊಳು ಶಿಖಾಗ್ರದೃಷ್ಟಿಯೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ಮುನ್ನೂರಾ ಐದುಕೋಟಿ ರುದ್ರ-ಬ್ರಹ್ಮ-ನಾರಾಯಣರಿಹರು. ಮುನ್ನೂರೈದುಕೋಟಿ ಇಂದ್ರಚಂದ್ರಾದಿತ್ಯರು ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಂಥ ಬ್ರಹ್ಮಾಂಡವ ಇಪ್ಪತ್ತೊಂದುಸಾವಿರದ ಇನ್ನೂರಾ ಎಂಟು ಬ್ರಹ್ಮಾಂಡವನೊಳಕೊಂಡುದೊಂದು ಶಿವೋತ್ತಮವೆಂಬ ಭುವನ ಆ ಭುವನದೊಳು ಶಿವಾನಂದನೆಂಬ ರುದ್ರಮೂರ್ತಿ ಇಹನು. ಆ ರುದ್ರಮೂರ್ತಿಯ ಓಲಗದಲ್ಲಿ ನೂರಾ ಐದುಕೋಟಿ ಬ್ರಹ್ಮ ನಾರಾಯಣ ರುದ್ರರು, ಇಂದ್ರಚಂದ್ರಾದಿತ್ಯರು, ನೂರಾ ಐದುಕೋಟಿ ವೇದಪುರುಷರು ಮುನೀಂದ್ರರು ದೇವರ್ಕಳಿಹರು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->