ಅಥವಾ

ಒಟ್ಟು 7 ಕಡೆಗಳಲ್ಲಿ , 1 ವಚನಕಾರರು , 7 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಆ ಐಕ್ಯನಲ್ಲಿಯ ಮಾಹೇಶ್ವರಂಗೆ ಆತ್ಮನಲ್ಲಿಯ ಅಪ್ಪುವೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಬುದ್ಧಿಯೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಗುರುಲಿಂಗವೇ ಲಿಂಗ. ಆ ಗುರುಲಿಂಗದಮುಖದಲ್ಲಿ ರಸತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಐಕ್ಯನಲ್ಲಿಯ ಪ್ರಸಾದಿಗೆ ಆತ್ಮನಲ್ಲಿಯ ಅಗ್ನಿಯೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ನಿರಹಂಕಾರವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಶಿವಲಿಂಗವೇ ಲಿಂಗ. ಆ ಶಿವಲಿಂಗದ ಮುಖದಲ್ಲಿ ರೂಪತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಐಕ್ಯನಲ್ಲಿಯ ಶರಣಂಗೆ ಆತ್ಮನಲ್ಲಿಯ ಆಕಾಶವೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಜ್ಞಾನವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಪ್ರಸಾದಲಿಂಗವೇ ಲಿಂಗ. ಆ ಪ್ರಸಾದಲಿಂಗಮುಖದಲ್ಲಿ ಶಬ್ದತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಐಕ್ಯನಲ್ಲಿಯ ಪ್ರಾಣಲಿಂಗಿಗೆ ಆತ್ಮನಲ್ಲಿಯ ವಾಯುವೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಮನವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಜಂಗಮಲಿಂಗವೇ ಲಿಂಗ. ಆ ಜಂಗಮಲಿಂಗದಮುಖದಲ್ಲಿ ಸ್ಪರ್ಶನತೃಪ್ತಿದ್ರವ್ಯವನು ಸಮರ್ಪಣವಂ ಮಾಡಿ, ತೃಪ್ತಿಪ್ರಸಾದವನೆ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಐಕ್ಯನಲ್ಲಿಯ ಐಕ್ಯಂಗೆ ಆತ್ಮನಲ್ಲಿಯ ಪರಮಾತ್ಮನೆ ಅಂಗ. ಆ ಅಂಗಕ್ಕೆ ಭಾವದಲ್ಲಿಯ ನಿರ್ಭಾವವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಅತಿಮಹಾಲಿಂಗವೇ ಲಿಂಗ. ಆ ಅತಿಮಹಾಲಿಂಗಮುಖದಲ್ಲಿ ಪರಮಪರಿಣಾಮವನೇ ಸಮರ್ಪಿಸಿ ಆ ಪರಮಪ್ರಸಾದವನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಆ ಐಕ್ಯನಲ್ಲಿಯ ಭಕ್ತಂಗೆ ಆತ್ಮನಲ್ಲಿಯ ಪೃಥ್ವಿಯೇ ಅಂಗ. ಆ ಅಂಗಕ್ಕೆ ಭಾವದಲ್ಲಿಯ ಸುಚಿತ್ತವೇ ಹಸ್ತ. ಆ ಹಸ್ತಕ್ಕೆ ಮಹಾಲಿಂಗದಲ್ಲಿಯ ಆಚಾರಲಿಂಗವೇ ಲಿಂಗ. ಆ ಆಚಾರಲಿಂಗದಮುಖದಲ್ಲಿ ಗಂಧದ ತೃಪ್ತಿಯನೆ ಸಮರ್ಪಣವಂ ಮಾಡಿ ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಆ ಐಕ್ಯನಲ್ಲಿಯ ಷಡ್ವಿಧ ಷಡುಸ್ಥಲಲಿಂಗ ಮಿಶ್ರಾರ್ಪಣ ಭೇದವೆಂತೆಂದಡೆ : ಆತ್ಮನೇ ಅಂಗವಾದ ಐಕ್ಯಂಗೆ ಭಾವವೆಂಬ ಹಸ್ತದಲ್ಲಿ ಮಹಾಲಿಂಗಕ್ಕೆ ಮನವೆಂಬ ಮುಖದಲ್ಲಿ ಪರಿಣಾಮದ್ರವ್ಯವನು ಸಮರ್ಪಣವಂ ಮಾಡಿ ತೃಪ್ತಿಯನೇ ಭೋಗಿಸುವನು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
-->