ಅಥವಾ

ಒಟ್ಟು 5 ಕಡೆಗಳಲ್ಲಿ , 5 ವಚನಕಾರರು , 5 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಊರಿನ ಹಾದಿಯಲ್ಲಿ ಹೋಗುತ್ತಿರಲಾಗಿ, ಎಯ್ದಿ ಬಂದಿತ್ತೊಂದು ಹಾವು. ಆರೂ ಇಲ್ಲದ ಠಾವಿನಲ್ಲಿ ಅದ ಮೀರಿ ಹೋಗಲಂಜಿದೆ. ಓಡಿದಡಟ್ಟಿತ್ತು ಮೀರಿ ನಿಂದಡೆ ಕಚ್ಚಿತ್ತು. ಗಾರಾದೆನಯ್ಯಾ ಈ ಹಾವ ಕಂಡು. ಹೋಗಲಿಲ್ಲ ನಿಲ್ಲಲಿಲ್ಲ, ಇದಕ್ಕಾರದೆ ಮೀರಿ ಹಿಡಿದ ಹಾವು ನಟ್ಟನಡುವೆ ಹಿಡಿಗೊಳಗಾಗಿ ಕಚ್ಚಿತ್ತು. [ಆ] ಹಾ[ವಿಗೆ] ತಲೆಯಿದ್ದಂತೆ ಬಾಲದಲ್ಲಿ [ವಿಷ]. ಬಾಲದ ವಿಷ ತಾಗಿ, ಊರೆಲ್ಲರೂ ಸತ್ತರು. ನಾ ಬದುಕಿದೆ, ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಊರೆಲ್ಲರೂ ಕೂಡಿ, ಬೇಟೆಗೆ ಹೋಗಿ, ಹಾರುವನ ಕೊಂದರು. ತಲೆವುಳಿದು, ಕಾಲ ಕಂಡಿಸಿ, ಕರುಳಡಗಿತ್ತು. ಬೇಟೆ ಬೆಲೆಯಾದುದಿಲ್ಲ. ಕೇಳುವ ಬನ್ನಿ, ಅರ್ಕೇಶ್ವರಲಿಂಗವ.
--------------
ಮಧುವಯ್ಯ
ಊರೆಲ್ಲರೂ ಕೂಡಿಕೊಂಡು ತಿಂದರು ದನವ. ಆ ಖಂಡವನೊಲ್ಲದೆ ಕಾಲ ಕೊಳಗು ತಲೆಯ ಕೊಂಬು ಬೇಯಿಸಿ ತಿಂಬ ಶರಣ. ತಿಂಬ ಕೊಂಬು ಕೊಳಗು ಅವನಂಗವ ನುಂಗಿತ್ತು. ಅಂಗ ಸುಸಂಗ ಲೀಯವಾಯಿತ್ತು. ಲೀಯ ನಿಜದಲ್ಲಿ ನಿಂದು ನಿರ್ಲೇಪವಾಯಿತ್ತು. ಆ ಗುಣವೇತರಿಂದ ಆಯಿತ್ತು ಎಂಬುದನರಿ ನಿನ್ನ ನೀ, ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.
--------------
ಕೋಲ ಶಾಂತಯ್ಯ
ಊರೆಲ್ಲರೂ ನೆರೆದು ಕಳ್ಳನ ಬೆಳ್ಳನೆಂದಡೆ, ಅವ ಕಳ್ಳನೋ, ಬೆಳ್ಳನೋ? ನೀವು ಹೇಳಿರೆ. ಇವರೆಲ್ಲರೂ ಕೂಡಿ ಬಲ್ಲವನವನಲ್ಲ ಎಂದಡೆ, ಅವನೆಲ್ಲಿರ್ದಡೇನು ಮಾರೇಶ್ವರಾ.
--------------
ಮಾರೇಶ್ವರೊಡೆಯರು
ಆರಿಕೆ ಬಿತ್ತಿದ ಗಿಡುವಿನ ಹೂವ ಕೊಯಿದು, ಊರೆಲ್ಲರೂ ಕಟ್ಟಿಸಿದ ಕೆರೆಯ ನೀರ ತಂದು, ನಾಡೆಲ್ಲರೂ ನೋಡಿಯೆಂದು ಪೂಜಿಸುತ್ತ, ಪೂಜಿಸಿದ ಪುಣ್ಯ ಹೂವಿಗೋ ? ನೀರಿಗೋ? ನಾಡೆಲ್ಲಕ್ಕೊರಿ ಪೂಜಿಸಿದಾತಗೊ? ಇದ ನಾನರಿಯೆ, ನೀ ಹೇಳೆಂದನಂಬಿಗ ಚೌಡಯ್ಯ.
--------------
ಅಂಬಿಗರ ಚೌಡಯ್ಯ
-->