ಅಥವಾ

ಒಟ್ಟು 87 ಕಡೆಗಳಲ್ಲಿ , 2 ವಚನಕಾರರು , 25 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನೂ ಏನೂ ಎನಲಿಲ್ಲದಂದು ಮಹಾಘನಕ್ಕೆ ಘನವಾದ ಮಹಾಘನ ನಿರಂಜನಾತೀತಪ್ರಣವದ ನೆನಹು ಮಾತ್ರದಲ್ಲಿ ನಿರಂಜನಪ್ರಣವ ಉತ್ಪತ್ಯವಾಯಿತ್ತು. ಆ ನಿರಂಜನಪ್ರಣವದ ನಿರ್ದೇಶ ಸ್ಥಲದ ವಚನವೆಂತೆಂದಡೆ : ಅವಾಚ್ಯಪ್ರಣವ ಕಲಾಪ್ರಣವ ಉತ್ಪತ್ಯವಾಗದತ್ತತ್ತ , ಪ್ರಣವನಾದ ಪ್ರಣವಬಿಂದು ಪ್ರಣವಕಲೆಗಳುತ್ಪತ್ಯವಾಗದತ್ತತ್ತ , ನಿರಂಜನಪ್ರಣವವಾಗಿದ್ದನಯ್ಯ ಇಲ್ಲದಂತೆ ನಮ್ಮ ಅಪ್ರಮಾಣಕೂಡಲಸಂಗಮದೇವ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಅಖಂಡಪರಿಪೂರ್ಣ ಅಪ್ರಮಾಣ ಅಗೋಚರ ಅಪ್ರಮೇಯ ಅವ್ಯಕ್ತ ಅನಂತತೇಜ ಅನಂತಪ್ರಚಯ ಅನಂತಕೋಟಿ ಸೂರ್ಯಚಂದ್ರಾಗ್ನಿಪ್ರಕಾಶವಾಗಿಹ ಮಹಾಘನಲಿಂಗದಲ್ಲಿ ವಿಶ್ವತೋ ಮುಖ, ವಿಶ್ವತೋ ಚಕ್ಷು, ವಿಶ್ವತೋ ಹಸ್ತ, ವಿಶ್ವತೋ ಪಾದ, ವಿಶ್ವತೋ ಬಾಹುವನುಳ್ಳ ಅನಾದಿ ಸದಾಶಿವತತ್ವ ಉತ್ಪತ್ಯವಾಯಿತ್ತು. ಆ ಸದಾಶಿವನ ಈಶಾನಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಅನಾದಿ ಶಿವತತ್ವದಿಂದ ಅನೇಕ ಮುಖ, ಅನೇಕ ಚಕ್ಷು, ಅನೇಕ ಬಾಹು, ಅನೇಕ ಪಾದವನುಳ್ಳ ಅನಾದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಈಶ್ವರತತ್ವದಲ್ಲಿ ಸಹಸ್ರ ಶಿರ, ಸಹಸ್ರ ಅಕ್ಷ, ಸಹಸ್ರ ಬಾಹು, ಸಹಸ್ರ ಪಾದವನುಳ್ಳ ಅನಾದಿ ಮಹೇಶ್ವರತತ್ವ ಉತ್ಪತ್ಯವಾಯಿತ್ತು. ಆ ಅನಾದಿ ಮಹೇಶ್ವರತತ್ವದಲ್ಲಿ ತ್ರಿಪಂಚಮುಖ, ತ್ರಿದಶಭುಜ, ತ್ರಿದಶಪಾದವನುಳ್ಳ ಆದಿ ಸದಾಶಿವ ಉತ್ಪತ್ಯವಾಯಿತ್ತು. ಆ ಆದಿ ಸದಾಶಿವತತ್ವದಲ್ಲಿ ಷಷ್ಠ ವಕ್ತ್ರ, ದ್ವಾದಶಭುಜ, ತ್ರಿಪಾದವನುಳ್ಳ ಆದಿ ಈಶ್ವರತತ್ವ ಉತ್ಪತ್ಯವಾಯಿತ್ತು. ಆ ಆದಿ ಈಶ್ವರತತ್ವದಲ್ಲಿ ಪಂಚವಿಂಶತಿ ಮುಖ, ಪಂಚದಶಭುಜವನುಳ್ಳ ಸದಾಶಿವತತ್ವ ಉತ್ಪತ್ಯವಾಯಿತ್ತು. ಇದಕ್ಕೆ ಅತಿ ಮಹಾಗಮೇ : ``ಅಖಂಡಲಿಂಗ ಸಂಭೂತಾ ಅನಾದಿ ಸಾದಾಖ್ಯಸ್ತಥಾ | ಅನಾದಿ ವಿಶ್ವತೋಮುಖತತ್ವೇ ಚ ಅನಾದಿ ಈಶ್ವರೋದ್ಭವಃ || ಅನಾದಿ ಈಶ್ವರತತ್ವೇ ಚ ಅನಾದಿ ಮಾಹೇಶ್ವರೋ ಭವೇತ್ | ಅನಾದಿ ಮಾಹೇಶ್ವರ ಶಂಭುತೊ ಆದಿ ಸದಾಖ್ಯ ಸ್ತಥಾ || ಆದಿ ಸಾದಾಖ್ಯತತ್ವೇ ಚ ಆದಿ ಈಶ್ವರೋದ್ಭವಂ | ಆದಿ ಈಶ್ವರತತ್ವೇ ಚ ಆದಿ ಮಾಹೇಶ್ವರೋ ಭವೇತ್ || ಆದಿ ಮಾಹೇಶ್ವರ ಶಂಭುತೊ ಶಿವಸದಾಶಿವಾಯುವೋ | ಇತಿ ತತ್ವೋದ್ಭವಜ್ಞಾನಂ ದುರ್ಲಭಂ ಕಮಲಾನನೇ|| '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ವಿಭೂತಿ ಭಸಿತ ಭಸ್ಮಕ್ಷಾರ ರಕ್ಷೆ ಎಂಬ ಪಂಚ ವಿಭೂತಿ ಉತ್ಪತ್ಯವೆಂತೆಂದಡೆ : ಸದ್ಯೋಜಾತ ವಾಮದೇವ ಅಘೋರ ತತ್ಪುರುಷ ಈಶಾನವೆಂಬ ಪಂಚಮುಖದಲ್ಲಿ, ಪೃಥ್ವಿ ಅಪ್ಪು ತೇಜ ವಾಯು ಆಕಾಶ ಉತ್ಪತ್ಯವಾಯಿತ್ತು. ಆ ಪೃಥ್ವಿಯಪ್ಪುತೇಜವಾಯುವಾಕಾಶದಿಂದಲ್ಲಿ ನಿವೃತ್ತಿ ಪ್ರತಿಷ್ಠೆ ವಿದ್ಯಾ ಶಾಂತಿ ಶಾಂತ್ಯಾತೀತಯೆಂಬ ಪಂಚಕಲೆಗಳುತ್ಪತ್ಯವಾಯಿತ್ತು. ಆ ಪಂಚಕಲೆಗಳಿಂದ ನಂದೆ ಭದ್ರೆ ಸುರಬ್ಥಿ ಸುಶೀಲೆ ಸುಮನೆಯೆಂಬ ಪಂಚಗೋವುಗಳುತ್ಪತ್ಯವಾಯಿತ್ತು. ಆ ಪಂಚಗೋವುಗಳ ಗೋಮಯದಲ್ಲಿ ವಿಭೂತಿ ಭಸಿತ ಭಸ್ಮಕ್ಷಾರ ರಕ್ಷೆಯೆಂಬ ಪಂಚವಿಭೂತಿ ಉತ್ಪತ್ಯವಾಯಿತ್ತು. ಇದಕ್ಕೆ ಜಾಬಾಲೋಪನಿಷತ್ : ``ಸದ್ಯೋಜಾತಾತ್ ಪೃಥಿವೀ ತಸ್ಯಾ ನಿವೃತ್ತಿಃ ತಸ್ಯಾಃ ಕಪಿಲವರ್ಣಾ ನಂದಾ ತಸ್ಯಾಃ ಗೋಮಯೇನ ವಿಭೂತಿರ್ಜಾತಾ || ವಾಮದೇವಾದುದಕಂ ತಸ್ಮಾತ್ ಪ್ರತಿಷ್ಠಾ ತಸ್ಯಾಃ ಕೃಷ್ಣವರ್ಣಾ ಭದ್ರಾ ತಸ್ಯಾಃ ಗೋಮಯೇನ ಭಸಿತಂ ಜಾತಂ || ಅಘೋರಾದ್ವಹ್ನಿಃ ತಸ್ಮಾತ್ ವಿದ್ಯಾ ತಸ್ಯಾಃ ರಕ್ತವರ್ಣಾ ಸುರಬ್ಥೀ ತಸ್ಯಾಃ ಗೋಮಯೇನ ಭಸ್ಮ ಜಾತಂ || ತತ್ಪುರುಷಾತ್ ವಾಯುಃ ತಸ್ಮಾತ್ ಶಾಂತಿ ಃ ತಸ್ಯಾಃ ಶ್ವೇತವರ್ಣಾ ಸುಶೀಲಾ ತಸ್ಯಾಃ ಗೋಮಯೇನ ಕ್ಷಾರಂ ಜಾತಂ || ಈಶಾನಾದಾಕಾಶಃ ತಸ್ಮಾತ್ ಶಾಂತ್ಯತೀತಾ ತಸ್ಯಾಃ ಚಿತ್ರವರ್ಣಾ ಸುಮನಾಃ ತಸ್ಯಾಃ ಗೋಮಯೇನ ರಕ್ಷಾ ಜಾತಾ ||'' ``ಐಶ್ವರ್ಯಕಾರಣಾತ್ ಭೂತಿಃ, ಭಾಸನಾತ್ ಭಸಿತಂ, ಸರ್ವಾಘಭಕ್ಷಣಾತ್ ಭಸ್ಮಂ, ಅಪದಾಂ ಕ್ಷರಣಾತ್ ಕ್ಷಾರಂ, ಭೂತಪ್ರೇತಪಿಶಾಚಬ್ರಹ್ಮರಾಕ್ಷಸಾಪಸ್ಮಾರ ಭವಬ್ಥೀತಿಭ್ಯೋsಬ್ಥಿರಕ್ಷಣಾತ್ ರಕ್ಷೇತಿ ||'' ಇಂತೆಂದುದು ಶ್ರುತಿ. ಇದಕ್ಕೆ ಕ್ರಿಯಾಸಾರೇ : ``ವಿಭೂತಿರ್ಭಸಿತಂ ಭಸ್ಮ ಕ್ಷಾರಂ ರಕ್ಷೇತಿ ಭಸ್ಮನಃ | ಭವಂತಿ ಪಂಚ ನಾಮಾನಿ ಹೇತು ರಕ್ಷಣಾದ್ರಕ್ಷೇತಿ ||'' ಇಂತೆಂದುದು ಶ್ರುತಿ. ``ಪಂಚಬ್ಥಿಃಬೃಷಂ ಐಶ್ವರ್ಯಕಾರಣಾದ್ಭೂತಿ, ಭಸ್ಮ ಸರ್ವಾಘಭಕ್ಷಣಾತ್, ಭಾಸನಾತ್ ಭಸಿತಂ, ತತ್ವಾ ಕ್ಷರಣಾತ್‍ಕ್ಷಾರಮಾಪದಂ, ಭೂತಪ್ರೇತಪಿಶಾಚೇಭ್ಯೋ ಸ್ವರ್ಗಹೇತುಭ್ಯೋಬ್ಥಿರಕ್ಷಣಾತ್ ರಕ್ಷಾ ಸ್ಯಾತ್ ಕ್ರೂರಸರ್ಪೇಭ್ಯೋ ವ್ಯಾಘ್ರಾದಿಭ್ಯಶ್ಚ ಸರ್ವದಾ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಮಹಾಸದಾಶಿವ ತತ್ವದ ಪಂಚಮುಖದಲ್ಲಿ ಉತ್ಪತ್ಯವಾದ ಪಂಚಮಹಾಭೂತಬ್ರಹ್ಮಾಂಡಕಪಾಲದೊಳು ಪಂಚಭೂತ ಬ್ರಹ್ಮಾಂಡಕಪಾಲ ಉತ್ಪತ್ಯವದೆಂತೆಂದೊಡೆ : ಆ ಮಹಾಶಿವತತ್ವದ ನಿರ್ಭಾವ ಮುಖದಲ್ಲಿ ಆತ್ಮನುತ್ಪತ್ಯವಾದನು. ಆ ಆತ್ಮನಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಆಕಾಶದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ವಾಯುವಿನಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಅಗ್ನಿಯಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಅಪ್ಪುವಿನಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಇದಕ್ಕೆ ಈಶ್ವರ ಉವಾಚ : ``ಆತ್ಮನ್ಯಾಕಾಶಸಂಭೂತಿರಾಕಾಶಾದ್ವಾಯು ಸಂಭವಃ | ವಾಯೋರಗ್ನಿಃ ಸಮುತ್ಪತ್ತಿರಗ್ನೇರಾಪ ಉದಾಹೃತಂ | ಅಪ್ ಪೃಥ್ವೀಚ ಸಂಭೂತಿರ್ಲಕ್ಷಣೈಕಪ್ರಭಾವತಃ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಬ್ರಹ್ಮವೆನಲು ಪರಬ್ರಹ್ಮವೆನಲು ಪರಮನೆನಲು ಪರಮೇಶ್ವರನೆನಲು ಪರಮಾತ್ಮನೆನಲು ಪರತತ್ವವೆನಲು ಪರಂಜ್ಯೋತಿಯೆನಲು ಪರವಸ್ತುವೆನಲು ಪರಾಪರವೆನಲು ಇಂತಿವೆಲ್ಲಾ ನಾಮದಲ್ಲಿಯೂ ಪ್ರಕಾಶಿಸುತ್ತಿಪ್ಪಾತನು ಪರಶಿವನು. ಪರಶಿವನೆಂದರೆ ಪರಮಾತ್ಮ. ಪರಮಾತ್ಮನೆಂದರೆ ಮಹಾಲಿಂಗ. ಆ ಮಹಾಲಿಂಗ ತಾನೆ ಪ್ರಸಾದಲಿಂಗವಾಗಿ ಉದ್ಭವಿಸಿತ್ತು. ಪ್ರಸಾದಲಿಂಗದಲ್ಲಿ ಜಂಗಮಲಿಂಗ ಹುಟ್ಟಿತ್ತು. ಜಂಗಮಲಿಂಗದಲ್ಲಿ ಶಿವಲಿಂಗ ಹುಟ್ಟಿತ್ತು. ಶಿವಲಿಂಗದಲ್ಲಿ ಗುರುಲಿಂಗ ಜನಿಸಿತ್ತು. ಗುರುಲಿಂಗ ಆಚಾರಲಿಂಗ ಉತ್ಪತ್ಯವಾಯಿತ್ತು. ಇಂತೀ ಷಡ್ವಿಧಲಿಂಗವೂ ಒಂದರಿಂದೊಂದಾದವು. ಒಂದನೊಂದ ಕೂಡಿಹವು. ಇಂತೀ ಷಟ್‍ಸ್ಥಲವೂ ಏಕವೆಂದರಿವುದಯ್ಯಾ, ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.
--------------
ತೋಂಟದ ಸಿದ್ಧಲಿಂಗ ಶಿವಯೋಗಿಗಳು
ಆದಿಮೂಲ ಅನಾದಿಮೂಲಂಗಳಿಗತ್ತತ್ತವಾಗಿಹ ಮಹಾಮೂಲಸ್ವಾಮಿಗತ್ತತ್ತವಾಗಿಹ ಅಖಂಡಮಹಾಮೂಲಸ್ವಾಮಿ ಅನಂತಕೋಟಿಬ್ರಹ್ಮಾಂಡಂಗಳ ಅನಂತಕೋಟಿಮಹಾಭುವನಂಗಳ ಅನಂತಕೋಟಿಲೋಕಾದಿಲೋಕಂಗಳ ಸೃಜಿಸಬೇಕೆಂಬ ನೆನಹುಮಾತ್ರದಲ್ಲಿ ಈ ನಿರಂಜನಾತೀತ ಪ್ರಣವದುತ್ಪತ್ಯವಾಯಿತ್ತು. ಆ ಅವಾಚ್ಯಪ್ರಣವದ ನೆನಹುಮಾತ್ರದಲ್ಲಿಯೇ ನಿರಂಜನ ಕಲಾಪ್ರಣವವು ಉತ್ಪತ್ಯವಾಯಿತ್ತು. ಆ ನಿರಂಜನಾತೀತ ಕಲಾಪ್ರಣವದ ನೆನಹುಮಾತ್ರದಲ್ಲಿಯೇ ಅನಾದಿಪ್ರಣವದುತ್ಪತ್ಯವಾಯಿತ್ತು. ಆ ಅನಾದಿಪ್ರಣವದ ನೆನಹುಮಾತ್ರದಲ್ಲಿಯೇ ಅನಾದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು. ಆ ಅನಾದಿ ಅಕಾರ ಉಕಾರ ಮಕಾರದ ನೆನಹುಮಾತ್ರದಲ್ಲಿಯೇ ಅದಿಪ್ರಣವ ಉತ್ಪತ್ಯವಾಯಿತ್ತು. ಆ ಆದಿಪ್ರಣವದ ನೆನಹು ಮಾತ್ರದಲ್ಲಿಯೇ. ಆದಿ ಅಕಾರ ಉಕಾರ ಮಕಾರ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಚಕ್ರಾತೀತಾಗಮೇ : ``ಅಖಂಡಮೂಲ ಚಿಂತಾಯಾಂ ನಿರಂಜನಾತೀತೋದ್ಭವಃ | ನಿರಂಜನಾತೀತ ಚಿಂತಾಯಾಂ ನಿರಂಜನೋಂಕಾರಸಂಭವಃ || ನಿರಂಜನಸ್ಯ ಚಿಂತಾಯಾಂ ಅವಾಚ್ಯಂ ನಾಮ ಜಾಯತೇ | ಅವಾಚ್ಯಸ್ಯ ಚ ಚಿಂತಾಯಾಂ ಕಲಾನಾಮ ಸಮುದ್ಗತಃ || ಕಲಾಪ್ರಣವಚಿಂತಾಯಾಂ ಅನಾದಿಪ್ರಣವ್ದೋಭವತ್ | ಅನಾದಿಪ್ರಣವ ಚಿಂತಾಯಾಂ ಅನಾದಿಮಂತ್ರ ಸಂಭವಃ || ಅನಾದಿಮಂತ್ರಚಿಂತಾಯಾಂ ಆದಿಪ್ರಣವ ಸಂಭವಃ | ಆದಿಪ್ರಣವಚಿಂತಾಯಾಂ ಅಕ್ಷರತ್ರಯಮುದ್ಗತಂ ||'' ಇಂತೆಂದುದಾಗಿ. ಇದಕ್ಕೆ ಮಹಾವೇದದ ಪ್ರಣವ ಪುರುಷಸೂಕ್ತೆ ೀ : ``ಓಂ ಅಖಂಡಮೂಲಚಿಂತಾಯಾಂ ನಿರಂಜನಾತೀತಮಜಾಯತ | ಕಲಾಪ್ರಣವ ತದಸ್ಯಾ ಅನಾದಿ ಓಂಕಾರ್ದೋಜಾಯತ || ಅನಾದ್ಯೋಂಕಾರಚಿಂತಾಯಾಮನಾದಿ ತ್ರಿಯಕ್ಷರಮಜಾಯತ | ಅನಾದಿ ತ್ರಿಯಕ್ಷರ ಚಿಂತಾಯಾಂ ಆದಿಪ್ರಣವ್ದೋಜಾಯತ | ನಿರಂಜನಾತೀತ ಪ್ರಣವಾಭ್ಯಾಂ ನಿರಂಜನಪ್ರಣವ್ದೋಜಾಯತ | ನಿರಂಜನಪ್ರಣವಾದಸ್ಯ ಅವಾಚ್ಯೋಂಕಾರ್ದೋಜಾಯತ | ಅವಾಚ್ಯೋಂಕಾರಚಿಂತಾಭ್ಯಾಂ ಕಲಾಪ್ರಣವ್ದೋಜಾಯತ | ಆದಿಪ್ರಣವಚಿಂತಾಯಾಂ ಅಕ್ಷರತ್ರಯಮಜಾಯತ ||'' ಇಂತೆಂದುದು ಶ್ರುತಿ. ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಆ ಆದಿ ಉಕಾರ ಪ್ರಣವ, ಆದಿ ಮಕಾರ ಪ್ರಣವ, ಆದಿ ಅಕಾರಪ್ರಣವ- ಈ ಮೂರು ಪ್ರಣವಂಗಳು ಸಂಯುಕ್ತವಾಗಿ, ಅಖಂಡ ಮಹಾಜ್ಯೋತಿರ್ಮಯವಾಗಿಹ ಪರಮೋಂಕಾರ ಉತ್ಪತ್ಯವಾಯಿತ್ತು. ಅದೆಂತೆಂದೊಡೆ : ಆ ಆದಿ ಉಕಾರಪ್ರಣವ, ಆದಿ ಮಕಾರಪ್ರಣವ, ಆದಿ ಅಕಾರಪ್ರಣವ-ಈ ಮೂರು ಬೀಜಾಕ್ಷರ. ಆದಿ ಉಕಾರಪ್ರಣವವೇ ಆದಿ ಬಿಂದುಪ್ರಣವ. ಆದಿ ಮಕಾರಪ್ರಣವವೇ ಆದಿ ಕಲಾಪ್ರಣವ. ಆದಿ ಅಕಾರಪ್ರಣವವೇ ಆದಿ ನಾದಪ್ರಣವ. ಆದಿ ಉಕಾರಪ್ರಣವವೇ ಸ್ವಯಂಭುಲಿಂಗ. ಆದಿ ಮಕಾರಪ್ರಣವವೇ ಶಿವತತ್ವ. ಆದಿ ಅಕಾರಪ್ರಣವವೇ ಗುರುತತ್ವ. ಇದಕ್ಕೆ ಈಶ್ವರ ಉವಾಚ : ``ಅಕಾರಂ ಗುರುತತ್ವಂ ಚ ಉಕಾರಂ ಲಿಂಗತತ್ವಕಂ | ಮಕಾರಂ ಶಿವತತ್ವಂ ಚ ಇತಿ ಭೇದೋ ವರಾನನೇ || '' ಇಂತೆಂದುದಾಗಿ, ಆ ಆದಿ ಉಕಾರಪ್ರಣವಕ್ಕೆ ಆದಿ ಬಿಂದುಪ್ರಣವವೇ ಆಧಾರ. ಆದಿ ಮಕಾರಪ್ರಣವಕ್ಕೆ ಆದಿ ಕಲಾಪ್ರಣವವೇ ಆಧಾರ. ಆದಿ ಅಕಾರಪ್ರಣವಕ್ಕೆ ಆದಿ ನಾದಪ್ರಣವವೇ ಆಧಾರ. ಆ ಆದಿ ಬಿಂದುಪ್ರಣವ, ಆದಿ ಕಲಾಪ್ರಣವ, ಆದಿ ನಾದಪ್ರಣವಕ್ಕೆ ಆ ಆದಿ ಪ್ರಕೃತಿಪ್ರಣವಕ್ಕೆ ಆ ಆದಿ ಪ್ರಾಣಮಾತ್ರೆಪ್ರಣವವೆ ಆಧಾರ. ಆ ಪ್ರಾಣಮಾತ್ರೆಪ್ರಣವಕ್ಕೆ ಅಖಂಡ ಮಹಾಜ್ಯೋತಿರ್ಮಯ ಲಿಂಗವೇ ಆಧಾರ. ಉ ಎಂಬ ಆದಿಬಿಂದುಪ್ರಣವವು, ಮ ಎಂಬ ಆದಿಕಲಾಪ್ರಣವವು [ಅಎಂಬ ಆದಿ ನಾದಪ್ರಣವವು] ಸಂಯುಕ್ತವಾಗಿ ಅಖಂಡ ಮಹಾಜ್ಯೋತಿರ್ಮಯವಾಗಿಹ ಪರಮೋಂಕಾರವಾಯಿತ್ತು ನೋಡಾ ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಅಖಂಡಮಹಾಜ್ಯೋತಿಪ್ರಣವದ ಅರ್ಧಚಂದ್ರಕಸ್ವರೂಪವಾಗಿಹ ಬ್ರಹ್ಮಾನಂದಬ್ರಹ್ಮದಲ್ಲಿ ಈಶ್ವರ, ವಾಯು, ಸ್ಪರ್ಶ, ಮನ, ತ್ವಕ್ಕು, ಪಾಣೇಂದ್ರಿಯವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ಈಶ್ವರೋ ವಾಯು ಸಂಸ್ಪರ್ಶೇ ಮನಸ್ತತ್ವಾನಿ ಉಚ್ಯತೇ | ಷಟ್‍ಸಮ್ಮಿಶ್ರಿತಂ ಯಸ್ತು ಬ್ರಹ್ಮಾನಂದಶ್ಚ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಪಂಚಮುಖ ದಶಭುಜವನುಳ್ಳ ಸದಾಶಿವನ ನಿರ್ಭಾವಮುಖದಲ್ಲಿ ಆತ್ಮನುತ್ಪತ್ಯವಾಯಿತ್ತು. ಆ ಸದಾಶಿವನ ಈಶಾನಮುಖದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಸದಾಶಿವನ ತತ್ಪುರುಷಮುಖದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ಸದಾಶಿವನ ಅಘೋರಮುಖದಲ್ಲಿ ಅಗ್ನಿ ಉತ್ಪತ್ಯವಾಯಿತ್ತು. ಆ ಸದಾಶಿವನ ವಾಮದೇವಮುಖದಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಸದಾಶಿವನ ಸದ್ಯೋಜಾತಮುಖದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು. ಆ ಸದಾಶಿವನ ಮನಸ್ಸಿನಲ್ಲಿ ಚಂದ್ರನುತ್ಪತ್ಯವಾಯಿತ್ತು. ಆ ಸದಾಶಿವನ ಚಕ್ಷುವಿನಲ್ಲಿ ಸೂರ್ಯನುತ್ಪತ್ಯವಾದನು ನೋಡಾ. ಇದಕ್ಕೆ ಈಶ್ವರೋsವಾಚ : ``ಸದ್ಯೋಜಾತಸ್ತಥಾಭೂಮಿ ವಾಮದೇವೋದ್ಭವೇ ಜಲಂ | ಅಘೋರಾದ್ವಹ್ನಿರಿತ್ಯುಕ್ತಂ ತತ್ಪುರುಷಾದ್ವಾಯುರುಚ್ಯತೇ || ಈಶಾನ್ಯದ್ಗಗನಾಕಾರಂ ಪಂಚಬ್ರಹ್ಮಮಯಂ ಜಗತ್ | ಚಂದ್ರಮಾ ಮನಸೋಃ ಜಾತ ಚಕ್ಷುಃ ಸೂರ್ಯೋ ಅಜಾಯತ | ಆತ್ಮಾ ಗುಹ್ಯಮುಖಾಜ್ಜಾತಃ ಇತಿ ಭೇದಂ ವರಾನನೇ ||'' ಇಂತೆಂದುದಾಗಿ, ಇದಕ್ಕೆ ಶ್ರೀಮಹಾದೇವ ಉವಾಚ : ``ಭೂಜಲಾಗ್ನಿ ಮರುದ್ವ್ಯೋಮ ಭಾಸ್ಕರೋ ಶಶಿಶೇಖರಃ | ದಿವಿಪ್ರಕಾಶತೇ ಸೂರ್ಯಃ ರಾತ್ರೌ ಚಂದ್ರಃಪ್ರಕಾಶತೇ | ಸರ್ವಚೈತನ್ಯಮಾತ್ಮಾನಂ ಶಿವಾಂಶೋsಷ್ಟಮೂರ್ತಯಃ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಅಖಂಡಮಹಾಜ್ಯೋತಿಪ್ರಣವದ ತಾರಕಸ್ವರೂಪವಾಗಿಹ ಮೂರ್ತಿಬ್ರಹ್ಮದಲ್ಲಿ ಬ್ರಹ್ಮ, ಪೃಥ್ವಿ, ಗಂಧ, ಚಿತ್ತ, ಘ್ರಾಣ, ಗುದವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ಧಾತಾ ಧಾತ್ರೀ ಚ ಗಂಧಶ್ಚ ಚಿತ್ತ ಂ ಘ್ರಾಣಗುದಸ್ತಥಾ | ಏತೇಷಾಂ ಮಿಶ್ರಿತಂ ಷಟ್ಕಂ ಮೂರ್ತಿಬ್ರಹ್ಮೇತಿ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಅಖಂಡಜ್ಯೋತಿರ್ಮಯವಾಗಿಹ ಪರಮೋಂಕಾರ ಪ್ರಣವದ ಜ್ಯೋತಿಸ್ವರೂಪದಲ್ಲಿ ಆತ್ಮನುತ್ಪತ್ಯವಾದನು. ಆ ಪ್ರಣವದ ದರ್ಪಣಾಕಾರದಲ್ಲಿ ಆಕಾಶ ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ವಾಯು ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ತೇಜ ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಕಸ್ವರೂಪದಲ್ಲಿ ಅಪ್ಪು ಉತ್ಪತ್ಯವಾಯಿತ್ತು. ಆ ಪ್ರಣವದ ತಾರಕಸ್ವರೂಪದಲ್ಲಿ ಪೃಥ್ವಿ ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ಚಿತ್ಪ್ರಕಾಶಾಗಮೇ : ``ಓಂಕಾರ ಜ್ಯೋತಿರೂಪೇ ಚ | ಆತ್ಮಾ ಚೈವ ಸಮುದ್ಭವಃ | ಓಂಕಾರ ದರ್ಪಣಾಕಾರೇ | ಆಕಾಶಂ ಚ ಸಮುದ್ಭವಂ || ಓಂಕಾರೇ ಚಾರ್ಧಚಂದ್ರೇ ಚ | ವಾಯುಶ್ಚೈವ ಸಮುದ್ಭವಃ | ಓಂಕಾರ ಕುಂಡಲಾಕಾರೇ | ತೇಜಶ್ಚೈವ ಸಮುದ್ಭವಂ | ಓಂಕಾರ ದಂಡರೂಪೇ ಚ | ಆಪಶ್ಚೈವ ಸಮುದ್ಭವಃ | ಓಂಕಾರ ತಾರಕರೂಪೇ | ಪೃಥ್ವಿಶ್ಚ ಸಮುದ್ಭವಃ | ಇತಿ ಷಷ*ಭೂತಂ ದೇವೀ | ಸ್ಥಾನ ಸ್ಥಾನೇ ಸಮುದ್ಭವಂ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನು ಷಟ್‍ಕಲೆಗಳುತ್ಪತ್ಯವದೆಂತೆಂದಡೆ : ಅಖಂಡ ಜ್ಯೋತಿರ್ಮಯವಾಗಿಹ ಗೋಳಕಾಕಾರಪ್ರಣವದ ಜ್ಯೋತಿಸ್ವರೂಪದಲ್ಲಿ ಶಾಂತ್ಯತೀತೋತ್ತರಕಲೆ ಉತ್ಪತ್ಯವಾಯಿತ್ತು. ಆ ಪ್ರಣವದ ದರ್ಪಣಾಕಾರದಲ್ಲಿ ಶಾಂತ್ಯತೀತಕಲೆ ಉತ್ಪತ್ಯವಾಯಿತ್ತು. ಆ ಪ್ರಣವದ ಅರ್ಧಚಂದ್ರಕದಲ್ಲಿ ಶಾಂತಿಕಲೆ ಉತ್ಪತ್ಯವಾಯಿತ್ತು. ಆ ಪ್ರಣವದ ಕುಂಡಲಾಕಾರದಲ್ಲಿ ವಿದ್ಯಾಕಲೆ ಉತ್ಪತ್ಯವಾಯಿತ್ತು. ಆ ಪ್ರಣವದ ದಂಡಸ್ವರೂಪದಲ್ಲಿ ಪ್ರತಿಷಾ*ಕಲೆ ಉತ್ಪತ್ಯವಾಯಿತ್ತು. ಆ ಪ್ರಣವದ ತಾರಕಸ್ವರೂಪದಲ್ಲಿ ನಿವೃತ್ತಿಕಲೆ ಉತ್ಪತ್ಯವಾಯಿತ್ತು. ಅಂತು ಈ ಷಟ್‍ಕಲಾ ನಾಮಂಗಳು ಕಲಾಧ್ವ ನೋಡಾ. ಇದಕ್ಕೆ ನಿಷ್ಕಲಾತೀತಾಗಮೇ : ``ಓಂಕಾರ ಜ್ಯೋತಿರೂಪೇ ಚ ಮಹತಿರ್ಜಾಯತೇ ಕಲಾ | ಓಂಕಾರ ದರ್ಪಣಾಕಾರೇ ಶಾಂತ್ಯತೀತಾ ಚ ಜಾಯತೇ || ಓಂಕಾರ ಅರ್ಧಚಂದ್ರೇ ಚ ಕಲಾಶಾಂತಿ ಚ ಜಾಯತೇ | ಓಂಕಾರ ಕುಂಡಲಾಕಾರೇ ಕಲಾವಿದ್ಯಾ ಚ ಜಾಯತೇ | ಓಂಕಾರ ದಂಡರೂಪೇ ಚ ಪ್ರತಿಷಾ* ಜಾಯತೇ ಕಲಾ || ಓಂಕಾರ ತಾರಕಾರೂಪೇ ನಿವೈತ್ತಿರ್ಜಾಯತೇ ಕಲಾ | ಇತಿ ಷಷ*ಕಲಾದೇವೀ ಸ್ಥಾನಸ್ಥಾನೇಷು ಜಾಯತೇ || '' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಆ ಅಖಂಡಮಹಾಜ್ಯೋತಿಪ್ರಣವದ ದಂಡಕಸ್ವರೂಪವಾಗಿಹ ಪಿಂಡಬ್ರಹ್ಮದಲ್ಲಿ ವಿಷ್ಣು, ಅಪ್ಪು, ರಸ, ಬುದ್ಧಿ, ಜಿಹ್ವೆ, ಗುಹ್ಯವೆಂಬ ಈ ಆರು ತತ್ವಂಗಳು ಉತ್ಪತ್ಯವಾಯಿತ್ತು ನೋಡಾ. ಇದಕ್ಕೆ ನಿರಂಜನಾತೀತಾಗಮೇ : ``ವಿಷ್ಣುರಾಪೋ ರಸೋ ಬುದ್ಧಿಃ ಜಿಹ್ವಾ ಗುಹ್ಯಸ್ತಥೈವ ಚ | ಷಟ್‍ತತ್ವಮಿದಂ ಪ್ರೋಕ್ತಂ ಪಿಂಡಬ್ರಹ್ಮೇತಿ ಕಥ್ಯತೇ ||'' ಇಂತೆಂದುದಾಗಿ, ಅಪ್ರಮಾಣಕೂಡಲಸಂಗಮದೇವಾ.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಏನು ಏನೂ ಎನಲಿಲ್ಲದ ಮಹಾಘನ ಚಿತ್ಕಲಾಪ್ರಣವದ ನೆನಹುಮಾತ್ರದಲ್ಲಿ ಅನಾದಿಪ್ರಣವದ ಉತ್ಪತ್ಯವಾಯಿತ್ತು. ಆ ಅನಾದಿಪ್ರಣವಸ್ಥಲದ ವಚನವೆಂತೆಂದಡೆ : ಆದಿ ಅಕಾರ ಆದಿ ಉಕಾರ ಆದಿ ಮಕಾರವೆಂಬ ಆದಿ ಅಕ್ಷರತ್ರಯಂಗಳಿಲ್ಲದಂದು. ಆದಿ ನಾದ ಆದಿ ಬಿಂದು ಆದಿ ಕಲೆಗಳೆಂಬ ಭಿನ್ನನಾಮ ತಲೆದೋರದಂದು, ಆದಿ ಪ್ರಕೃತಿ ಆದಿ ಪ್ರಾಣವಿಲ್ಲದಂದು, ಅಖಂಡ ಜ್ಯೋತಿರ್ಮಯವಾಗಿಹ ಗೊಳಕಾಕಾರಪ್ರಣವ ಜ್ಯೋತಿರ್ಲಿಂಗವಿಲ್ಲದಂದು, ಓಂಕಾರವೆಂಬ ಅನಾದಿಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಸಂಗಮದೇವನು
--------------
ಬಾಲಸಂಗಯ್ಯ ಅಪ್ರಮಾಣ ದೇವ
ನಿರಂಜನಪ್ರಣವದ ನೆನಹುಮಾತ್ರದಿಂದ ಅವಾಚ್ಯಪ್ರಣವ ಉತ್ಪತ್ಯವಾಯಿತ್ತು. ಇನ್ನು ಅವಾಚ್ಯಪ್ರಣವದ ನಿರ್ದೇಶಸ್ಥಲದ ವಚನವೆಂತೆಂದಡೆ : ನಿರಾಳಶಾಂತ್ಯತೀತೋತ್ತರಕಲೆ, ನಿರಾಳ ಶಾಂತ್ಯತೀತ ಕಲೆಗಳಿಲ್ಲದಂದು, ನಿರಾಳಶಾಂತಿಕಲೆ ನಿರಾಳವಿದ್ಯಾಕಲೆಗಳಿಲ್ಲದಂದು, ನಿರಾಳಪ್ರತಿಷಾ*ಕಲೆ ನಿರಾಳನಿವೃತ್ತಿಕಲೆಗಳಿಲ್ಲದಂದು, ನಿರಾಳಮಹಾಸಾದಾಖ್ಯ ನಿರಾಳಮೂರ್ತಿಸಾದಾಖ್ಯವಿಲ್ಲದಂದು, ನಿರಾಳಕರ್ತೃಸಾದಾಖ್ಯ ನಿರಾಳಕರ್ಮಸಾದಾಖ್ಯವಿಲ್ಲದಂದು, ಅವಾಚ್ಯ ಪ್ರಣವವಾಗಿದ್ದನು ನೋಡಾ ಇಲ್ಲದಂತೆ, ನಮ್ಮ ಅಪ್ರಮಾಣಕೂಡಲಸಂಗಮದೇವನು.
--------------
ಬಾಲಸಂಗಯ್ಯ ಅಪ್ರಮಾಣ ದೇವ
ಇನ್ನಷ್ಟು ... -->