Some error occurred
ಅಥವಾ

ಒಟ್ಟು 124 ಕಡೆಗಳಲ್ಲಿ , 49 ವಚನಕಾರರು , 118 ವಚನಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

Created with Highcharts 3.0.6Chart context menuಪದವಿರುವ ವಚನಗಳುವಚನಕಾರರು241116131114111111241411211141211151141111121912621ಒಟ್ಟು10ಅಕ್ಕಮಹಾದೇವಿ28ಅಕ್ಕಮ್ಮ37ಅಂಬಿಗರಚೌಡಯ್ಯ66ಅಮುಗೆರಾಯಮ್ಮ18ಅರಿವಿನಮಾರಿತಂದೆ3ಅಲ್ಲಮಪ್ರಭುದೇವರು55ಅವಸರದರೇಕಣ್ಣ36ಆದಯ್ಯ86ಉರಿಲಿಂಗದೇವ32ಉರಿಲಿಂಗಪೆದ್ದಿ142ಏಕಾಂತರಾಮಿತಂದೆ14ಏಲೇಶ್ವರಕೇತಯ್ಯ17ಕರುಳಕೇತಯ್ಯ 169ಕಾಮಾಟದಭೀಮಣ್ಣ56ಗಜೇಶಮಸಣಯ್ಯಗಳಪುಣ್ಯಸ್ತ್ರೀ92ಗಣದಾಸಿವೀರಣ್ಣ 16ಗುಪ್ತಮಂಚಣ್ಣ 35ಗುರುಸಿದ್ಧದೇವರು 82ಘಟ್ಟಿವಾಳಯ್ಯ 7ಚನ್ನಬಸವಣ್ಣ24ಜಕ್ಕಣಯ್ಯ 83ಡಕ್ಕೆಯಬೊಮ್ಮಣ್ಣ 46ತುರುಗಾಹಿರಾಮಣ್ಣ 30ತೋಂಟದಸಿದ್ಧಲಿಂಗಶಿವಯೋಗಿಗಳು 11ದೇಶಿಕೇಂದ್ರಸಂಗನಬಸವಯ್ಯ 9ನಗೆಯಮಾರಿತಂದೆ112ಪ್ರಸಾದಿಭೋಗಣ್ಣ 1ಬಸವಣ್ಣ51ಬಾಹೂರಬೊಮ್ಮಣ್ಣ 79ಭೋಗಣ್ಣ 26ಮಡಿವಾಳಮಾಚಿದೇವ 13ಮಧುವಯ್ಯ49ಮನಸಂದಮಾರಿತಂದೆ 67ಮನುಮುನಿಗುಮ್ಮಟದೇವ61ಮರುಳಶಂಕರದೇವ 8ಮಾದಾರಧೂಳಯ್ಯ 23ಮೆರೆಮಿಂಡಯ್ಯ19ಮೋಳಿಗೆಮಾರಯ್ಯ 114ರಕ್ಕಸಬೊಮ್ಮಿತಂದೆ/ ರಕ್ಕಸಬ್ರಹ್ಮಯ್ಯ 75ವಚನಭಂಡಾರಿಶಾಂತರಸ180ಶಂಕರದಾಸಿಮಯ್ಯ 62ಶಿವಲೆಂಕಮಂಚಣ್ಣ40ಸಗರದಬೊಮ್ಮಣ್ಣ 5ಸಿದ್ಧರಾಮೇಶ್ವರ71ಸುಂಕದಬಂಕಣ್ಣ 42ಸ್ವತಂತ್ರಸಿದ್ಧಲಿಂಗ 12ಹಡಪದಅಪ್ಪಣ್ಣ 20ಹಡಪದಪ್ಪಣ್ಣಗಳಪುಣ್ಯಸ್ತ್ರೀಲಿಂಗಮ್ಮ4ಹೇಮಗಲ್ಲಹಂಪ 01020
ತಾ ವ್ರತಿಯಾಗಿದ್ದಲ್ಲಿ ತನ್ನ ಸೀಮೆ ಒಳಗಾಗಿ, ಕಟಕ ಪಾರದ್ವಾರ ಹುಸಿ ಕೊಲೆ ಕಳವು ಅನ್ಯಾಹಾರ ಮುಂತಾದ ನಿಂದಕ ದುರ್ಜನ ಭವಿಸಂಗ ಉಳ್ಳವರ ತಂದೆತಾಯಿಯೆಂದು ಹೆಂಡಿರುಮಕ್ಕಳೆಂದು ಬಂಧುಬಳಗವೆಂದು ಅವರನು ಅಂಗಳದಲ್ಲಿ ಕೂಡಿಕೊಂಡಡೆ, ಅವರ ತಂದು ಕೊಳನಿಕ್ಕಿದಡೆ, ತಿಂಗಳು ಸತ್ತ ನಾಯಮಾಂಸವ ತಂದು ತಿಂದ ದೋಷ ತಪ್ಪದು. ಇದಕ್ಕೆ ಹಿಂದೆ ನೆನೆಯಲಿಲ್ಲ, ಮುಂದೆ ನೋಡಲಿಲ್ಲ. ಈ ತಪ್ಪು ಹೊತ್ತಲ್ಲಿಯೆ ಅಂದಿಗೆ ನೂರು ತುಂಬಿತ್ತೆಂದು ಅಂಗವ ಬಿಡಬೇಕು. ಅಂಗವ ಬಿಡದ ಭಂಡರ ಕಂಡಡೆ ಆಚಾರವೆ ಪ್ರಾಣವಾದ ರಾಮೇಶ್ವರಲಿಂಗನೊಪ್ಪ.
--------------
ಅಕ್ಕಮ್ಮ
ನೇತ್ರಂಗಳ ಮುಚ್ಚಿ ರೂಹಿಲ್ಲದ ನಿಲವ ಕಾಣಬೇಕು. ಶ್ರೋತ್ರಂಗಳ ಮುಚ್ಚಿ ಶಬ್ದವಿಲ್ಲದ ನಾದವ ಕೇಳಬೇಕು. ಜಿಹ್ವೆಯ ಮುಚ್ಚಿ ಸ್ವಾದುವಿಲ್ಲದ ರುಚಿಯನರಿಯಬೇಕು. ನಾಸಿಕವ ಮುಚ್ಚಿ ಉಸುರ ನುಂಗಿದ ಪರಿಮಳವನರಿಯಬೇಕು. ಅಂಗವ ಮುಚ್ಚಿ ಲಿಂಗಸಂಗ ಸಮಸುಖವನರಿಯಬೇಕು. ಸೌರಾಷ್ಟ್ರ ಸೋಮೇಶ್ವರವಿಡಿದು, ಪಂಚೇಂದ್ರಿಯಗಳಳಿದು ಲಿಂಗೇಂದ್ರಿಯಗಳಾಗಬೇಕು.
--------------
ಆದಯ್ಯ
ಸಜ್ಜನವೆಂಬ ಮಾರ್ಗದಲ್ಲಿ ಒಬ್ಬ ಬಾಲೆಯು ನಿಂದು ನಿಜವ ತೋರುತಿರ್ಪಳು ನೋಡಾ. ಆ ನಿಜವ ಈ ಜನಂಗಳೇನು ಬಲ್ಲರಯ್ಯ ? ಅಜ ಹರಿ ಸುರ ನಾರದ ಮೊದಲಾದವರಿಗೆ ಅಗೋಚರವೆನಿಸಿತ್ತು ನೋಡಾ. ಸ್ವಜ್ಞಾನಿಯಾದ ಶರಣನು ಆ ನಿಜವ ನೋಡಬಲ್ಲನಯ್ಯಾ. ಆ ಬಾಲೆಯ ಅಂಗವ ಕೂಡಬಲ್ಲನಯ್ಯ. ಆ ಸಜ್ಜನವೆಂಬ ಮಾರ್ಗವ ಹತ್ತಬಲ್ಲನಯ್ಯ. ಇಂತಪ್ಪ ಶರಣಂಗೆ ನಮೋ ನಮೋ ಎನುತಿರ್ದೆ ನೋಡಾ ಝೇಂಕಾರ ನಿಜಲಿಂಗಪ್ರಭುವೆ.
--------------
ಜಕ್ಕಣಯ್ಯ
ಅಂಗದಲ್ಲಿ ಅರ್ಪಿತವಾದ ಸುಖವು ಲಿಂಗದಲ್ಲಿ ಲೀಯವಾಯಿತ್ತೆಂದಡೆ ಅಂಗವ ಲಿಂಗದಲ್ಲಿ ಮತ್ತೆ ನಿಕ್ಷೇಪಿಸಿಹೆನೆಂಬ ಕಾರಣವೇಕಯ್ಯಾ ಶರಣಂಗೆ ಪ್ರಾಣನ ಲಿಂಗದಲ್ಲಿ ಸವೆಸಿ ನಿರವಯವಾಗಬಹುದಲ್ಲದೆ ಕರ್ಮದಿಂದಾದ ಕಾಯವ ಸವೆಸಿ ಸಯವಪ್ಪ ಪರಿ ಎಂತು ಹೇಳಯ್ಯಾ ಕೂಡಲಸಂಗಮದೇವಾ, ನಿಮ್ಮ ಶರಣರು ಕಾಯವಿಡಿದಿರ್ದು ನಿರ್ಮಾಯವಾಗಿರ್ಪುದ ಹೇಳಯ್ಯಾ ನಿಮ್ಮ ಧರ್ಮ.
--------------
ಬಸವಣ್ಣ
ಅಕ್ಕನ ಮೂಲೆಯ ಮೊದಲಿನಲ್ಲಿ ಮೂವರು ತಮ್ಮಂದಿರು ಬಂದರು. ತಮ್ಮ ತಮ್ಮ ಅಂಗವ ತೋರಿ, ಅಕ್ಕನ ಮುಂದೆ ಬೆತ್ತಲೆ ಆಡುತ್ತಿದ್ದರೆ, ಬೆತ್ತಲೆಯ ಮುಟ್ಟಿ ಕಂಡು, ತಮ್ಮನದ ತನ್ನದರಲ್ಲಿ ಇಕ್ಕಿಕೊಂಡಳು. ಅಕ್ಕ ತಮ್ಮನ ಕೂಡಿ ಒಪ್ಪವಾಗಿ ಬಾಳುತ್ತಿದ್ದರು, ಬಂಕೇಶ್ವರಲಿಂಗವನರಿತ ಕಾರಣ.
--------------
ಸುಂಕದ ಬಂಕಣ್ಣ
ಸತಿಯ ಸಂಗವತಿಸುಖವೆಂದರಿದಡೇನು ? ಗಣಸಾಕ್ಷಿಯಾಗಿ ವಿವಾಹವಾಗದನ್ನಕ್ಕರ ? ಕಣ್ಣು ಕಾಂಬುದೆಂದಡೆ, ಕತ್ತಲೆಯಲ್ಲಿ ಕಾಂಬುದೆ ದೀಪವಿಲ್ಲದನ್ನಕ್ಕರ ? ಸೂರ್ಯನ ಪ್ರಕಾಶದಿಂದ ಕಂಡು ತಾನೆ, ಕಂಡೆನೆಂಬ ಜಗದ ನಾಣ್ಣುಡಿಯಂತಾಯಿತ್ತು. ಅಂಗವ ಬಿಟ್ಟು ಆತ್ಮನುಂಟೆ ? ಶಕ್ತಿಯ ಬಿಟ್ಟು ಶಿವನುಂಟೆ ? ಇದು ಕಾರಣ_ಸ್ಥೂಲ ಸೂಕ್ಷ್ಮಕಾರಣ ತನುತ್ರಯವಿರಲು, ಇಷ್ಟ ಪ್ರಾಣ ಭಾವವೆಂಬ ತ್ರಿವಿಧಲಿಂಗಸಂಬಂಧ ಬೇಡವೆಂದಡೆ ಅಸಂಖ್ಯಾತ ಪ್ರಮಥಗಣಂಗಳೊಪ್ಪುವರೆ ? ಕೂಡಲಚೆನ್ನಸಂಗಯ್ಯನಲ್ಲಿ ಇಷ್ಟಲಿಂಗಸಂಬಂಧವಿಲ್ಲದವರ ಮುಖವ ನೋಡಲಾಗದು ಪ್ರಭುವೆ.
--------------
ಚನ್ನಬಸವಣ್ಣ
ಅಂಗದಲ್ಲಿ ಲಿಂಗಸಂಗ, ಲಿಂಗದಲ್ಲಿ ಅಂಗಸಂಗವ ಮಾಡಿಹೆನೆಂದಡೆ, ಸಂದು ಭೇದವಳಿವ ಪರಿ ಎಂತು ಹೇಳಾ ಅಂಗದಲ್ಲಿ ಸಂಗವ ಮಾಡಿಹೆನೆಂದಡೆ, ಮುಂದುಗೆಡಿಸಿ ಕಾಡುವನು ಶಿವನು. ಕಾಮವೆಂಬ ಬಯಕೆಯಲ್ಲಿ ಅಳಲಿಸುವ ಬಳಲಿಸುವ ಶಿವನು. ಲಿಂಗದಲ್ಲಿ ಅಂಗವ ತಂದು ನಿಕ್ಷೇಪಿಸಿಹೆನೆಂದಡೆ, ಅಂಗದಿಂದ ಅತ್ತತ್ತಲೋಸರಿಸಿ ಓಡುವನಯ್ಯಾ ಶಿವನು. ಹೆಣ್ಣು ಗಂಡಾದಡೆ ಸಂಗಕ್ಕೆ ಒಲಿವನು ಕೇಳಾ ಶಿವನು. ಕೂಡಲಸಂಗಮದೇವರ ಬೆರಸುವಡೆ, ಬ್ಥಿನ್ನವಿಲ್ಲದೆ ಕಲಿಯಾಗಿರಬೇಕು ಕೇಳಾ ಅವ್ವಾ.
--------------
ಬಸವಣ್ಣ
ಕಾಯವ ಬಿಟ್ಟು ಪ್ರಾಣಹೋದ ಮತ್ತೆ, ಆ ಕಾಯಕ್ಕೆ ಆ ಪ್ರಾಣ ಪುನರಪಿಯಾಗಿ ಒಪ್ಪುದೆ ? ಅಂಗವ ಬಿಟ್ಟು ಲಿಂಗ ಬಿದ್ದ ಮತ್ತೆ, ಮತ್ತಾ ಅಂಗಕ್ಕೆ ಲಿಂಗವುಂಟೆ ? ಲಯವೆಂದಿದ್ದಡೂ ತಪ್ಪದು. ಪ್ರಾಯಶ್ಚಿತವೆಂದು ಪ್ರಕಾರವ ಮಾಡಿ, ಶ್ವಾನನ ಕಾಲಿನಲ್ಲಿ ಸೋಮಪಾನವನೆರೆದು, ಪಾಯಸ ಶುದ್ಧವಾಯಿತ್ತೆಂದು ಕೊಂಬವನಂತೆ, ಈ ಗುಣವ ಕಾಬುದಕ್ಕೆ ಮೊದಲೆ ಮನಸಂದಿತ್ತು ಮಾರೇಶ್ವರಾ.
--------------
ಮನಸಂದ ಮಾರಿತಂದೆ
ಮಲವ ಕಳೆವಲ್ಲಿ, ಜಲವ ಬಿಡುವಲ್ಲಿ, ರುಜೆರೋಗಂಗಳು ಬಿಡುವಲ್ಲಿ, ಸಕಲಸುಖಭೋಗಂಗಳ ಹಿಡಿವಲ್ಲಿ, ಅಧಮ ವಿಶೇಷವೆಂಬ ಭಾವಂಗಳು ಅಂಗವ ಮುಟ್ಟುವಲ್ಲಿ, ಅಂಗಕ್ಕೆ ಕಟ್ಟು, ಆತ್ಮಂಗೆ ವ್ರತ, ಏಲೇಶ್ವರಲಿಂಗದ ಕೂಟ ತಪ್ಪದಿರಬೇಕು.
--------------
ಏಲೇಶ್ವರ ಕೇತಯ್ಯ
ಅನುಭಾವ ಅನುಭಾವವೆಂದು, ನುಡಿದಾಡುತ್ತಿಪ್ಪಿರಿ. ನಿಮ್ಮ ತನುವಿನಿಚ್ಛೆಗೆ ಅನುವಿಗೆ ಬಂದಂತೆ, ಬಿನುಗರ ಮುಂದೆ ಬೊಗುಳಿಯಾಡುವ ನಿನಗಂದೆ ದೂರ. ಅನುಭಾವವೆಂತೆಂದರೆ, ನಮ್ಮ ಹಿಂದನರಿದು, ಮುಂದೆ ಲಿಂಗದಲ್ಲಿ ನೋಡುವ ಶರಣರ ಅಂಗವ ಸೋಂಕಿ ನಾ ಬದುಕಿದೆ ಕಾಣಾ, ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
--------------
ಹಡಪದ ಅಪ್ಪಣ್ಣ
ಹಾವಿನ ಹಲ್ಲಿನ ವಿಷದ ಕೊಳಪೆಯ ಮೂಲೆಯಲ್ಲಿ, ಮೂರು ಕಪ್ಪೆ ಹುಟ್ಟಿದವು. ಒಂದಕ್ಕೆ ಕಾಲಿಲ್ಲ, ಒಂದಕ್ಕೆ ಬಾಯಿಲ್ಲ, ಒಂದಕ್ಕೆ ಕಣ್ಣಿಲ್ಲ. ಕಾಲಿಲ್ಲದ ಕಪ್ಪೆ ಮೂರುಲೋಕವ ಸುತ್ತಿತ್ತು. ಬಾಯಿಲ್ಲದ ಕಪ್ಪೆ ಬ್ರಹ್ಮಾಂಡವ ನುಂಗಿತ್ತು. ಕಣ್ಣಿಲ್ಲದ ಕಪ್ಪೆ ಕಂಗಾಣದವರ ಕಂಡಿತ್ತು. ಈ ಖಂಡಮಂಡಲದ ಅಂಗವ ಬಿಡಿಸು, ಎನ್ನ ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವೆ.
--------------
ಮನುಮುನಿ ಗುಮ್ಮಟದೇವ
ಗುರುವೆಂಬೆನೆ, ಕಂಡಕಂಡವರಿಗೆ ಲಿಂಗವ ಕೊಟ್ಟು, ದ್ರವ್ಯಕ್ಕೆ ಹಂಗಿಗನಾದ. ಲಿಂಗವೆಂಬೆನೆ, ಸಂಸಾರಕ್ಕೆ ಅಂಗವ ಕೊಟ್ಟ. ಜಂಗಮವೆಂಬೆನೆ, ಕಂಡಕಂಡವರ ಅಂಗಳವ ಹೊಕ್ಕು, ಬಂಧನಕ್ಕೊಳಗಾದ. ಎನಗಿದರಂದವಾವುದೊ, ನಿರಂಗ ನಿಃಕಳಂಕ ಮಲ್ಲಿಕಾರ್ಜುನಾ.
--------------
ಮೋಳಿಗೆ ಮಾರಯ್ಯ
ಜಲದಲ್ಲಿ ಕದಡಿ ಎಯ್ದುವ ಮಣ್ಣಿಂಗೆ ಜಲವೆ ಕಾಲಾದಂತೆ, ಆ ಜಲ ನಿಲೆ ಮಣ್ಣು ಮುನ್ನಿನ ಅಂಗವ ಬೆರಸಿದಂತೆ. ಆ ಕುರುಹಿಂಗೆ ಅರಿವೆ ಆಶ್ರಯವಾಗಿ, ಆ ಅರಿವಿಂಗೆ ಕರುಹಿನ ವಾಸ ಅವಗವಿಸಿದ ಮತ್ತೆ, ಬೇರೊಂದೆಡೆಯಿಲ್ಲ, ಕಾಲಾಂತಕ ಬ್ಥೀಮೇಶ್ವರಲಿಂಗವುತಾನೆ.
--------------
ಡಕ್ಕೆಯ ಬೊಮ್ಮಣ್ಣ
ಅಶನ ವ್ಯಸನ ಸರ್ವವಿಷಯಾದಿಗಳಲ್ಲಿ ಹುಸಿದು, ಪಿಸುಣತ್ವದಿಂದ ಗಸಣಿಗೊಂಡು, ಮಾಡಿಸಿಕೊಂಬುದು ಸದ್ಗುರುವಿಗೆ ಸಂಬಂಧವಲ್ಲ. ತಿಲರಸ-ವಾರಿಯ ಭೇದದಂತೆ, ಮಣಿಯೊಳಗಿದ್ದ ಸೂತ್ರದಂತೆ ಅಂಗವ ತೀರ್ಚಿ ಪಾಯ್ಧು ನಿಂದ ಅಹಿಯ ಅಂಗದಂತೆ ಗುರುಸ್ಥಲಸಂಬಂಧ, ಎನ್ನಯ್ಯ ಚೆನ್ನರಾಮೇಶ್ವರಲಿಂಗವನರಿಯಬಲ್ಲಡೆ.
--------------
ಏಕಾಂತರಾಮಿತಂದೆ
ಗಾಜಿನ ಗೋಡೆಯ ಸುಣ್ಣ ವೇದ್ಥಿಸಬಲ್ಲುದೆ ? ನಾಗರಹೆಡೆಯ ಚಿಕ್ಕೆರ ಬಲ್ಲುದೆ ? ಉರಿಯ ಪುತ್ಥಳಿಯ ಅರಗು ಮುಟ್ಟಿ ಅಪ್ಪಬಲ್ಲುದೆ ? ಲಿಂಗಮಯ ಸಿರಿವಂತರ ಅಂಗವ ಸಂಗಿಸಬಲ್ಲವೆ ಇಂದ್ರಿಯಂಗಳು, ಇಂತೀ ಗುಣವ ಹಿಂಗಿ, ಲಿಂಗವೆ ತಾನಾಗಿಪ್ಪ ನಿಃಕಳಂಕ ಮಲ್ಲಿಕಾರ್ಜುನನ ?
--------------
ಮೋಳಿಗೆ ಮಾರಯ್ಯ
ಇನ್ನಷ್ಟು ... -->
Some error occurred