ಇನ್ನು ನಿರಾಳ ಷಡುಚಕ್ರಂಗಳ ಮೇಲಣ
ನಾಲ್ಕು ಚಕ್ರಂಗಳ ಕ್ರಮವೆಂತೆಂದಡೆ :
ನಿರ್ವಾಣಲಿಂಗಚಕ್ರವೆಂದು, ಮಹಾನಿರ್ವಾಣಲಿಂಗಚಕ್ರವೆಂದು,
ಅತಿಮಹಾನಿರ್ವಾಣಘನಲಿಂಗಚಕ್ರವೆಂದು,
ಅತಿಮಹಾತೀತ ಮಹಾನಿರ್ವಾಣ ಘನಲಿಂಗಚಕ್ರವೆಂದು.
ನಾಲ್ಕು ಚಕ್ರಕ್ಕೂ ಪದ್ಮವಿಲ್ಲ ವರ್ಣವಿಲ್ಲ,
ಅಕ್ಷರಂಗಳಿಲ್ಲ, ಶಕ್ತಿಯಿಲ್ಲ, ಅದ್ಥಿದೇವತೆ ಇಲ್ಲ, ನಾದವಿಲ್ಲ,
ಬೀಜಾಕ್ಷರವಿಲ್ಲದೆ ಬೆಳಗುತ್ತಿಹುದು.
ಆ ಚಕ್ರಂಗಳು ವರ್ಣಕ್ಕೂ ವರ್ಣಾತೀತವಾಗಿಹುದು,
ಉಪಮೆಗೆ ಉಪಮಾತೀತವಾಗಿಹುದು
ಚಕ್ರಕ್ಕೂ ಚಕ್ರಾತೀತವಾಗಿಹುದೆಂದು
ಚಕ್ರಾತೀತಾಗಮದಲ್ಲಿ ಪ್ರಸಿದ್ಧವಾಗಿ ಹೇಳುತ್ತಿಹುದು ನೋಡಾ
ಅಪ್ರಮಾಣಕೂಡಲಸಂಗಮದೇವಾ.